DEAD BODY 
ಉಡುಪಿ

ಅಪರಿಚಿತ ಯುವಕನ ಮೃತದೇಹ ಪತ್ತೆ

ಪಡುಬಿದ್ರಿ: ಉದ್ಯಾವರ ಪಿತ್ರೋಡಿಯ ತಂಡೇಲ ಗೆಸ್ಟ್‌ಹೌಸ್ ಬಳಿಯ ಪಾಪನಾಶಿನಿ ಹೊಳೆಯಲ್ಲಿ ಅಪರಿಚಿತ ಯುವಕನ ಮೃತದೇಹ ಮಂಗಳವಾರ ಪತ್ತೆಯಾಗಿದೆ.

30-35 ವರ್ಷ ಪ್ರಾಯದ ಯುವಕನ ಮೃತದೇಹದ ಮೇಲೆ ಒಳ ಉಡುಪು ಇದ್ದು, ಬೇರೆ ಯಾವುದೇ ಬಟ್ಟೆ ಇರಲಿಲ್ಲ. ಮುಖದ ಮೇಲೆ ಮೀನು ತಿಂದಿದಿರುವ ಗಾಯಗಳು ಇದ್ದು, ಮೂರು ದಿನದ ಹಿಂದೆ ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.