ಗುರುಪುರ: ಗಂಜಿಮಠ ಮಳಲಿ ಕ್ರಾಸ್ ಬಳಿ ಅಪರಿಚಿತ ಮಹಿಳೆಯ ಶವ ಶುಕ್ರವಾರ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ಮೃತದೇಹವನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಹಿಳೆಯ ವಯಸ್ಸು ಅಂದಾಜು 60-65 ವರ್ಷ ಇದ್ದು, ಗೋಧಿ ಮೈಬಣ್ಣ ಮತ್ತು ಕೋಲು ಮುಖ ಹೊಂದಿರುವ ಈಕೆ ನೀಲಿ-ಹಳದಿ ಸೀರೆ ಉಟ್ಟುಕೊಂಡಿದ್ದಾರೆ. ಎಡ ಕೆನ್ನೆಯಲ್ಲಿ ಮಚ್ಚೆ, ಬಲ ಕೈಯಲ್ಲಿ ಹಚ್ಚೆ ಹಾಕಿರುವ ಗುರುತು ಪತ್ತೆಯಾಗಿದೆ. ಕೆಲವು ದಿನಗಳಿಂದ ಗಂಜಿಮಠ ಪರಿಸರದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೃತ ಮಹಿಳೆಯ ವಾರಸುದಾರರು ಇದ್ದಲ್ಲಿ ಬಜ್ಪೆ ಪೊಲೀಸ್ ಠಾಣೆ ಸಂಪರ್ಕಿಸಬಹುದು.