ಕಾರ್ಕಳ: ಹಿರ್ಗಾನ ಗ್ರಾಮದ ಎಣ್ಣೆಹೊಳೆ ಸ್ವರ್ಣಾ ನದಿಯ ಕಾಂಕ್ರೀಟ್ ದಂಡೆಯಲ್ಲಿ ಕಣಜಾರು ಗ್ರಾಮದ ಸುರೇಶ ಶೆಟ್ಟಿ(56) ಎಂಬುವರ ಶವ ಬುಧವಾರ ಪತ್ತೆಯಾಗಿದೆ.
ಮಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಅ.9ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಬಜ್ಪೆ ಪೊಲೀಸ್ ಠಾಣಾ ಸರಹದ್ದಿನ ಕಟೀಲು ಎಂಬಲ್ಲಿಂದ ಕಾಣೆಯಾಗಿದ್ದರು. ಬುಧವಾರ ಎಣ್ಣೆಹೊಳೆ ಸ್ವರ್ಣ ನದಿಯ ಕಾಂಕ್ರೀಟ್ ದಂಡೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹ ಸುರೇಶ ಶೆಟ್ಟಿ ಅವರದ್ದೇ ಎಂದು ಗುರುತಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.