dead body 
ಉಡುಪಿ

ಅನ್ಯರಾಜ್ಯದ ಕಾರ್ಮಿಕನ ಮೃತದೇಹ ಪತ್ತೆ

ಇಂದಿರಾ ಎನ್ ಕೆ
ಕಾಸರಗೋಡು: ರಾಜಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಪಾಣತ್ತೂರು ಪೇಟೆಯಲ್ಲಿ ಪಶ್ಚಿಮ ಬಂಗಾಳ ಡಾರ್ಜಿಲಿಂಗ್‌ನ ಸಿಲಿಗುರಿ ಗ್ರಾಮದ ಇಂದ್ರಕುಮಾರ್(32) ಎಂಬಾತನ ಮೃತದೇಹ ತರಕಾರಿ ಅಂಗಡಿಯೊಂದರ ಸಮೀಪ ಪತ್ತೆಯಾಗಿದೆ.
ಭಾನುವಾರ ಸಂಜೆ 5ರಿಂದ ರಾತ್ರಿ 10ರ ಮಧ್ಯೆ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ತರಕಾರಿ ಅಂಗಡಿ ಸಮೀಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದಾಗಿ ದೃಢಪಟ್ಟಿದೆ. ರಾಜಾಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.