Death 
ಉಡುಪಿ

ಸಮುದ್ರ ತೀರದಲ್ಲಿ ಶವ ಪತ್ತೆ

ಇಂದಿರಾ ಎನ್ ಕೆ

ಉಪ್ಪಳ: ಇಲ್ಲಿನ ಮುಸೋಡಿ ಮಲಬಾರ್ ನಗರದ ಸಮುದ್ರ ತೀರದಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆಗೆ ಅಪರಿಚಿತ ವ್ಯಕ್ತಿಯ ಶವ ಕೊಚ್ಚಿ ಬಂದ ರೀತಿಯಲ್ಲಿ ಪತ್ತೆಯಾಗಿದೆ.

ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯಂತೆ ಕಾಣುವ, ದಪ್ಪ ಶರೀರ ಹೊಂದಿರುವ ಪುರುಷನ ಮೃತದೇಹವು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಕೊಚ್ಚಿ ಬಂದಿದೆ ಎನ್ನಲಾಗಿದೆ. ಮೃತದೇಹವನ್ನು ಮಂಗಲ್ಪಾಡಿ ಸರ್ಕಾರಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವಾರೀಸುದಾರು ಇದ್ದಲ್ಲಿ ಠಾಣೆಯನ್ನು ಸಂಪರ್ಕಿಸಬಹುದು. ಕುಂಬಳೆ ಕೋಸ್ಟಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.