Death 
ಉಡುಪಿ

ಶಂಭೂರು ಡ್ಯಾಂನ ಟ್ರಾಷ್ ಮೆಷಿನ್‌ನಲ್ಲಿ ಶವ ಪತ್ತೆ

ಬಂಟ್ವಾಳ: ಶಂಭೂರು ಎಎಂಆರ್ ಡ್ಯಾಂನ ಟ್ರಾಷ್ ಮೆಷಿನ್‌ನಲ್ಲಿ 60 ವರ್ಷದ ಅಪರಿಚಿತ ಮಹಿಳೆಯ ಶವ ಶುಕ್ರವಾರ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಎಂಆರ್ ಡ್ಯಾಂನ ಟಿಆರ್‌ಸಿಎಂ ಆಪರೇಟರ್ ಯತೀನ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಟ್ರಾಷ್ ಮೆಷಿನ್‌ನಲ್ಲಿ ಮೃತದೇಹ ಕಂಡು ಬಂದಿದೆ.
ಪೊಲೀಸರಿಗೆ ಮಾಹಿತಿ ನೀಡಿ ಟ್ರಾಷ್ ಮೆಷಿನ್‌ನಿಂದ ಮೃತದೇಹವನ್ನು ಹೊರ ತೆಗೆದು ಇಂಟಕ್‌ನಲ್ಲಿ ಇರಿಸಲಾಗಿದೆ. ಮಹಿಳೆಯ ಮೃತದೇಹ ನದಿಯಲ್ಲಿ ಕೊಚ್ಚಿಕೊಂಡು ಬಂದು ಟ್ರಾಷ್‌ನಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಡ್ಯಾಂನ ಎಚ್‌ಆರ್ ವಿಭಾಗದ ಮ್ಯಾನೇಜರ್ ನಾಗರಾಜ ಶೆಟ್ಟಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.