DEAD BODY 
ಉಡುಪಿ

ಪಾಪನಾಶಿನಿ ಹೊಳೆಯಲ್ಲಿ ಶವ ಪತ್ತೆ

ಇಂದಿರಾ ಎನ್ ಕೆ
ಪಡುಬಿದ್ರಿ: ಕಾಪು ತಾಲೂಕು ಏಣಗುಡ್ಡೆ ಗ್ರಾಮದ ಬಳಿ ಪಾಪನಾಶಿನಿ ಹೊಳೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಬುಧವಾರ ಪತ್ತೆಯಾಗಿದೆ. ಮೃತದೇಹ ತೇಲಾಡುತ್ತಿರುವ ಬಗ್ಗೆ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಪರಿಶೀಲಿಸಿದ್ದು, ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿ ತುಂಬು ತೋಳಿನ ಬಿಳಿ ಶರ್ಟ್, ಹಸಿರು ಮತ್ತು ನೀಲಿ ಬಣ್ಣದ ಚೌಕುಳಿಯ ಲುಂಗಿ ಧರಿಸಿದ್ದು, ಸುವಾರು 55ರಿಂದ 60 ವರ್ಷದ ಮಧ್ಯ ವಯಸ್ಸಿನವರಾಗಿದ್ದಾರೆ. ಮೃತದೇಹವನ್ನು ಅಜ್ಜರಕಾಡು ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.