ರಕ್ತದಾನ ಶಿಬಿರವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ್ ಉಪ್ಪಿನಕುದ್ರು ಉದ್ಘಾಟಿಸಿದರು. ಪ್ರಮುಖರಾದ ಸಂತೋಷ್ ಶೆಟ್ಟಿ ಹಕ್ಲಾಡಿ, ಪ್ರಸಾದ್ ಕೋಡಿ, ಸತೀಶ್ ಸಾಲ್ಯಾನ್, ಸಚಿನ್ ಕುಮಾರ್ ಶೆಟ್ಟಿ, ಡಾ.ಗಣೇಶ್ ಮೋಹನ್, ಕುಸುಮಾಕರ ಶೆಟ್ಟಿ, ಕಿರಣ್ ದೇವಾಡಿಗ, ಉಮೇಶ್ ಶೆಟ್ಟಿ, ಹರೀಶ್ ಕೋಟ್ಯಾನ್, ಆನಂದ ಬಿಲ್ಲವ ಉಪಸ್ಥಿತರಿದ್ದರು.
ಕುಂದಾಪುರ: ರಕ್ತದಾನ ಶ್ರೇಷ್ಠ ದಾನ. ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಿದ ಪುಣ್ಯ ಗಳಿಸಬಹುದು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ್ ಉಪ್ಪಿನಕುದ್ರು ಹೇಳಿದರು.
ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ, ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಉಡುಪಿ, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್, ಜೆ.ಸಿ.ಐ ಕುಂದಾಪುರ ಸಿಟಿ, ಶ್ರೀ ಸಾಯಿಸ್ಪಂದನ ಫೌಂಡೇಶನ್ ಕುಂದಾಪುರ, ಯುನೈಟೆಡ್ ಫ್ರೆಂಡ್ಸ್ ತಲ್ಲೂರು ಸಹಭಾಗಿತ್ವದಲ್ಲಿ ರಕ್ತನಿಧಿ ವಿಭಾಗ ಕೆ.ಎಂ.ಸಿ ಮಣಿಪಾಲ ಸಹಕಾರದೊಂದಿಗೆ ಪ್ರಶಾಂತ್ ತಲ್ಲೂರು ಸಂಯೋಜನೆಯಲ್ಲಿ ತಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಭಾನುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹಕ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ಕೋಡಿ, ಸತೀಶ್ ಸಾಲ್ಯಾನ್, ಸಚಿನ್ ಕುಮಾರ್ ಶೆಟ್ಟಿ, ಡಾ.ಗಣೇಶ್ ಮೋಹನ್, ಕುಸುಮಾಕರ ಶೆಟ್ಟಿ, ಕಿರಣ್ ದೇವಾಡಿಗ, ಯೋಜನಾಧಿಕಾರಿ ಉಮೇಶ್ ಶೆಟ್ಟಿ, ಹರೀಶ್ ಕೋಟ್ಯಾನ್, ಆನಂದ ಬಿಲ್ಲವ ಉಪಸ್ಥಿತರಿದ್ದರು.
ರಕ್ತದಾನಿಗಳಾದ ಗುರುರಾಜ್ ಹೆಬ್ಬಾರ್ ಕುಂದಾಪುರ ಮತ್ತು ಪ್ರಶಾಂತ್ ಕುಂದಾಪುರ ಅವರನ್ನು ಅಭಿನಂದಿಸಲಾಯಿತು. ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವರ್ಗಾವಣೆಗೊಂಡ ವೈದ್ಯಾಧಿಕಾರಿ ಡಾ.ರಂಗನಾಥ್ ವೈ.ಪಿ. ಅವರನ್ನು ಸನ್ಮಾನಿಸಲಾಯಿತು. ಭಾಸ್ಕರ್ ಆಚಾರ್ಯ ಉಪ್ಪಿನಕುದ್ರು ಸ್ವಾಗತಿಸಿದರು. ಕಾವ್ಯ ಶೆಟ್ಟಿ ಪ್ರಾರ್ಥಿಸಿದರು. ಶ್ವೇತಾ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.