ಕುಂದಾಪುರ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು. ಪ್ರಮುಖರಾದ ಪಾವ್ಲ್ ರೇಗೋ, ಶೈಲಾ ಲೂವಿಸ್, ಡಾ.ಆದರ್ಶ ಹೆಬ್ಬಾರ್, ಎಸ್.ಜಯಕರ ಶೆಟ್ಟಿ, ನಾಗರಾಜ್, ಹಂಸರಾಜ್ ಶೆಟ್ಟಿ, ಕಿರಣ್ ದೇವಾಡಿಗ, ರೇಮಿ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ರಕ್ತದಾನ ಜೀವ ಉಳಿಸುವ ಪುಣ್ಯ ಕಾರ್ಯ

ಕುಂದಾಪುರ: ರಕ್ತದಾನ ಮಾಡಿ, ಜೀವ ಉಳಿಸಿ. ರಕ್ತದಾನ ಮಾಡುವುದರಿಂದ ಮೂವರ ಪ್ರಾಣ ಉಳಿಸಬಹುದು. ರಕ್ತದಾನ ಜೀವ ಉಳಿಸುವ ಪುಣ್ಯದ ಕಾರ್ಯ ಎಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರು ಪಾವ್ಲ್ ರೇಗೋ ಹೇಳಿದರು.
ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ ಆರೋಗ್ಯ ಆಯೋಗ ಕುಂದಾಪುರ ವಲಯ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜೆಸಿಐ ಕುಂದಾಪುರ ಸಿಟಿ, ಲಯನ್ಸ್ ಕ್ಲಬ್ ಹಂಗಳೂರು ಸಹಯೋಗದಲ್ಲಿ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ಭಾನುವಾರ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಶಂಕರನಾರಾಯಣ ಮದರ್ ಥೆರೆಸಾ ಪ್ರೌಢಶಾಲೆಯ ಪ್ರೀತಮ್ ಜಿ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ವಲಯದ ಅಧ್ಯಕ್ಷೆ ಶೈಲಾ ಲೂವಿಸ್ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಆದರ್ಶ ಹೆಬ್ಬಾರ್, ಭಾರತೀಯ ರೆಡ್‌ಕ್ರಾಸ್ ಕುಂದಾಪುರ ಘಟಕದ ಸಭಾಪತಿ ಎಸ್.ಜಯಕರ ಶೆಟ್ಟಿ, ವಿನಯಾ ನರ್ಸಿಂಗ್ ಹೋಮ್ ಡಯಾಲಿಸಿಸ್ ವಿಭಾಗ ಮುಖ್ಯಸ್ಥ ನಾಗರಾಜ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಹಂಸರಾಜ್ ಶೆಟ್ಟಿ, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಕಿರಣ್ ದೇವಾಡಿಗ, ವಲಯದ ಮಾಜಿ ಅಧ್ಯಕ್ಷೆ ರೇಮಿ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರ ಸಂಚಾಲಕಿ ಡಾ.ಸೋನಿ ಡಿಕೋಸ್ಟಾ ಸ್ವಾಗತಿಸಿದರು. ವಲಯದ ಕಾರ್ಯದರ್ಶಿ ಮರಿಯಾ ಡಿಸಿಲ್ವಾ ವಂದಿಸಿದರು. ಆಶಾ ಕರ್ವಾಲೋ ಕಾರ್ಯಕ್ರಮ ನಿರೂಪಿಸಿದರು.