ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಆರೂರು ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ಬಿ.ಎನ್. ಶಂಕರ ಪೂಜಾರಿ, ಅನಂತಪದ್ಮನಾಭ ಸಾಮಗ, ಗೋಕುಲದಾಸ್ ಕಚ್ಚೂರು, ಜಿಲ್ಲಾ ಮರಾಠಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್, ಮಲ್ಪೆ ದಯಾನಂದ್ ಕೆ. ಸುವರ್ಣ, ಪ್ರಭಾಕರ್ ಪೂಜಾರಿ, ಸುಧಾಕರ್ ಕುಂದರ್, ಡಾ.ವೀಣಾ, ಶೇಖರ್ ಶೆಟ್ಟಿ, ಮಟ್ಟು ಯತೀಶ್ ಕೋಟ್ಯಾನ್ ಇದ್ದರು.
* ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಮೆಚ್ಚುಗೆ
* ಸುವರ್ಣ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ
ಉಡುಪಿ: ಯಾವುದೇ ಪ್ರತಿಲದ ಅಪೇಕ್ಷೆಯಿಲ್ಲದೆ ಸಮಾಜಕ್ಕೆ ನಿರಂತರ ಸೇವೆ ಸಲ್ಲಿಸುವ ಮನಸ್ಸುಳ್ಳ ಶಾಸಕ ಯಶ್ಪಾಲ್ ಸುವರ್ಣ ಅವರು ಅಂಗಾಂಗ ದಾನದ ನೋಂದಣಿ ಮಾಡಿರುವುದು ಶ್ರೇಷ್ಠ ಕಾರ್ಯವಾಗಿದೆ. ಅವರ ಜನ್ಮದಿನದ ನಿಮಿತ್ತ ಆಯೋಜಿಸಿರುವ ರಕ್ತದಾನ ಶಿಬಿರವು ಸಾಮಾಜಿಕ ಕಳಕಳಿಯ ಹಾಗೂ ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಪುರಭವನದಲ್ಲಿ ಟೀಮ್ ಯಶ್ಪಾಲ್ ಸುವರ್ಣ ಉಡುಪಿ ತಂಡದ ನೇತೃತ್ವದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ ಮಾತನಾಡಿ, ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತಿರುವ ಶಾಸಕ ಯಶ್ಪಾಲ್ ಅವರ ಸೇವಾ ಮನೋಭಾವ ಮೆಚ್ಚುವಂತದ್ದು. ಅವರ ಭವಿಷ್ಯ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ಸಗ್ರಿಯ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಅನಂತಪದ್ಮನಾಭ ಸಾಮಗ ಮಾತನಾಡಿದರು.
ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಗೋಕುಲದಾಸ್ ಕಚ್ಚೂರು, ಜಿಲ್ಲಾ ಮರಾಠಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್, ಮಲ್ಪೆ ಮತ್ಸ್ಯೋದ್ಯಮಿ ದಯಾನಂದ್ ಕೆ. ಸುವರ್ಣ, ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಉದ್ಯಮಿ ಸುಧಾಕರ್ ಕುಂದರ್, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ.ವೀಣಾ, ಟೀಮ್ ಯಶ್ಪಾಲ್ ಸುವರ್ಣ ಉಡುಪಿಯ ಸಂಚಾಲಕ ಶೇಖರ್ ಶೆಟ್ಟಿ ಹಿರಿಯಡ್ಕ ಉಪಸ್ಥಿತರಿದ್ದರು.
ಮಟ್ಟು ಯತೀಶ್ ಕೋಟ್ಯಾನ್ ಸ್ವಾಗತಿಸಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 215 ಯೂನಿಟ್ ರಕ್ತ ಸಂಗ್ರಹಿಸಲಾಯಿತು.