ಉಡುಪಿಯ ಉದ್ಯಾವರದಲ್ಲಿ ಮಂಜಣ್ಣ ಸಂಸ್ಮರಣೆ ನಿಮಿತ್ತ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಪ್ರಶಾಂತ್ ಜತ್ತನ್ನ ಉದ್ಘಾಟಿಸಿದರು. ಸುನೀಲ್ ಡಿ. ಬಂಗೇರ, ನಿತಿನ್ ಜೆ. ಸಾಲಿಯಾನ್, ಅಬ್ದುಲ್ ಜಲೀಲ್ ಸಾಹೇಬ್, ನಾಗೇಶಕುಮಾರ್, ಡಾ.ವೀಣಾ, ಗಿರೀಶ್ ಗುಡ್ಡೆಯಂಗಡಿ ಇತರರಿದ್ದರು.
* ಪ್ರಶಾಂತ್ ಜತ್ತನ್ನ ಅಭಿಪ್ರಾಯ
* 'ಮಂಜಣ್ಣ ನೆನಪು-14' ಉದ್ಘಾಟನೆ
ಉಡುಪಿ: ದಾನ ಮಾಡುವ ಒಂದು ಯೂನಿಟ್ ರಕ್ತದಿಂದ ಇನ್ನಾವುದೋ ಕುಟುಂಬದ ಮಗು, ತಂದೆ&ತಾಯಿ ಅಥವಾ ಅವರ ಬಂಧುಗಳ ಜೀವ ಉಳಿಸಿಕೊಳ್ಳಬಹುದು. ಹೀಗಾಗಿ ರಕ್ತದಾನ ಶಿಬಿರವೆಂದರೆ ಅದು ಇನ್ನೊಬ್ಬರಿಗೆ ಜೀವದಾನ ನೀಡುವ ಶಿಬಿರ. ಶುಭ ಸಂದರ್ಭ, ರಾಷ್ಟ್ರೀಯ ದಿನಗಳು, ಸಾಧಕರು, ಗಣ್ಯರ ಸ್ಮರಣೆ ನಿಮಿತ್ತ ರಕ್ತದಾನ ಶಿಬಿರ ಆಯೋಜಿಸುವುದು ಸ್ತುತ್ಯಾರ್ಹ ಕಾರ್ಯ ಎಂದು ಕೆಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಶ್ಲಾಘಿಸಿದರು.
ಉಡುಪಿಯ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲಿ ಸೇವಾ ಮತ್ತು ಸಾಂಸತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯ ಸಹಕಾರದಲ್ಲಿ ಸಂಸ್ಥೆಯ ಗೌರಾಧ್ಯಕ್ಷರಾಗಿದ್ದ ಮಂಜುನಾಥ್ ಉದ್ಯಾವರ ಸಂಸ್ಮರಣೆ ನಿಮಿತ್ತ ಆಯೋಜಿಸಿದ್ದ 'ಮಂಜಣ್ಣ ನೆನಪು-14' ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಟಪಾಡಿ ಬ್ರಹ್ಮಶ್ರೀ ಮೀಡಿಯಾ ನೆಟ್ವರ್ಕ್ನ ಆಡಳಿತ ನಿರ್ದೇಶಕ ಸುನೀಲ್ ಡಿ. ಬಂಗೇರ ಹಾಗೂ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿತಿನ್ ಜೆ. ಸಾಲಿಯಾನ್ ಮಾತನಾಡಿ, ಮಂಜಣ್ಣ ಅವರಲ್ಲಿದ್ದ ಜನಪರ ಚಿಂತನೆಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಂತಹ ಸಾಧಕನ ಹೆರಲ್ಲಿ ಶಾಶ್ವತ ಸ್ಮಾರಕ ನಿರ್ಮಿಸಬೇಕಿದೆ. ಮಂಜಣ್ಣ ಎಂದರೆ ನೆನಪು ಮಾತ್ರವಲ್ಲ, ಅದೊಂದು ಅದ್ಭುತ ವ್ಯಕ್ತಿ&ಶಕ್ತಿ ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಅಬ್ದುಲ್ ಜಲೀಲ್ ಸಾಹೇಬ್, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷ ರಿಯಾಜ್ ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ 75 ಯೂನಿಟ್ ರಕ್ತ ಸಂಗ್ರಹಿಸಲಾಯಿತು.