death 
ಉಡುಪಿ

ಕೆರೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆ

ಕಾಸರಗೋಡು: ಬಿಜೆಪಿ ಕಾರ್ಯಕರ್ತ, ಉಪ್ಪಳ ಕೊಂಡೆವೂರಿನ ಸಂದೀಪ್ ಶೆಟ್ಟಿ ಅಲಿಯಾಸ್ ಅಣ್ಣು(44) ಎಂಬುವರ ಮೃತದೇಹ ಮನೆ ಸಮೀಪದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.

ಸೋಮವಾರ ಮನೆಯಿಂದ ಉಪ್ಪಳ ಶಾರದಾ ನಗರದ ಸೋಡಾ ಫ್ಯಾಕ್ಟರಿ ಕೆಲಸಕ್ಕೆಂದು ಹೊರಟವರು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಕೆರೆ ಸಮೀಪ ಅವರ ಅಂಗಿ ಪತ್ತೆಯಾಗಿತ್ತು. ಅಗ್ನಿಶಾಮಕದಳ ಸಿಬ್ಬಂದಿ ಕೆರೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಕೆರೆಗೆ ಅಳವಡಿಸಿರುವ ಮೋಟಾರ್‌ನ ಫೂಟ್‌ವಾಲ್ವ್ ದುರಸ್ತಿ ವೇಳೆ ಆಯತಪ್ಪಿ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.