ಉಡುಪಿ ಶೀರೂರು ಮಠದ ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಬಿ.ವೈ. ವಿಜಯೇಂದ್ರ ಅವರಿಗೆ ಯಶ್​ಪಾಲ್​ ಸುವರ್ಣ ಆಮಂತ್ರಣಪತ್ರ ನೀಡಿದರು. ಕುತ್ಯಾರು ನವೀನ್​ ಶೆಟ್ಟಿ,ಸುರೇಶ್​ ಶೆಟ್ಟಿ ಗುರ್ಮೆ, ಮಟ್ಟಾರು ರತ್ನಾಕರ್​ ಹೆಗ್ಡೆ, ಪ್ರಮೋದ್​ ಮಧ್ವರಾಜ್​, ರೇಷ್ಮಾ ಉದಯ ಶೆಟ್ಟಿ, ಲಾಲಾಜಿ ಆರ್​. ಮೆಂಡನ್​ ಇತರರಿದ್ದರು. 
ಉಡುಪಿ

ಶೀರೂರು ಪರ್ಯಾಯಕ್ಕೆ ವಿಜಯೇಂದ್ರಗೆ ಆಹ್ವಾನ

* ಆಮಂತ್ರಣಪತ್ರ ನೀಡಿದ ಯಶ್​ಪಾಲ್​ ಸುವರ್ಣ 

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ, ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅವರು ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
ಬೆಂಗಳೂರಿನಲ್ಲಿ ವಿಜಯೇಂದ್ರ ಅವರನ್ನು ಸೋಮವಾರ (ಜ.12) ಭೇಟಿಯಾಗಿ, ಶೀರೂರು ಪರ್ಯಾಯ ಮಹೋತ್ಸವವನ್ನು ಅದ್ದೂರಿಯಾಗಿ ಹಾಗೂ ನಾಡಹಬ್ಬದ ರೀತಿಯಲ್ಲಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕು ಎಂದು ಆಹ್ವಾನಿಸಿದರು.
ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಕಾಪು ಶಾಸಕ ಸುರೇಶ್​ ಶೆಟ್ಟಿ ಗುರ್ಮೆ, ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್​ ಹೆಗ್ಡೆ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಕಾಪು ಮಾಜಿ ಶಾಸಕ ಲಾಲಾಜಿ ಆರ್​. ಮೆಂಡನ್​, ಬಿಜೆಪಿ ಮುಖಂಡರಾದ ಉದಯಕುಮಾರ್​ ಶೆಟ್ಟಿ ಕಿದಿಯೂರು, ಪ್ರಭಾಕರ್​ ಪೂಜಾರಿ, ದಿನಕರ್​ ಬಾಬು, ದಿನೇಶ್​ ಅಮೀನ್​, ರಾಜೀವ್​ ಕುಲಾಲ್​, ಶ್ರೀಕಾಂತ್​ ನಾಯಕ್​ ಅಲೆವೂರು, ರೇಷ್ಮಾ ಉದಯ ಶೆಟ್ಟಿ ಇತರರು ಉಪಸ್ಥಿತರಿದ್ದರು.