ಕೃಷ್ಣ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.  
ಉಡುಪಿ

ಮೋದಿ ಅವಧಿಯಲ್ಲಿ ಭ್ರಷ್ಟಾಚಾರ ಪಲಾಯನ: ಶೀರೂರು ಶ್ರೀ ಆಶಯ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿ 12 ಸಂವತ್ಸರಗಳು ಸಂದಿವೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ, ಅಧರ್ಮ ಪಲಾಯನ ಮಾಡುವಂತಾಗಲಿ. ಈ ಸಾಮರ್ಥ್ಯ ಮೋದಿಯವರಿಗೆ ಕೃಷ್ಣ ದೇವರು ನೀಡಲಿ (ಮೋದಿ ಬತ್​ದ್​ ಪದರಾಡ್​ ಆಂಡ್​, ಭ್ರಷ್ಟಾಚಾರ, ಅಧರ್ಮ ಪದರಾಡ್​ ಆವಡೊ) ಎಂದು ಪರ್ಯಾಯ ಶೀರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದರು.

ನರೇಂದ್ರ ಮೋದಿಯವರು ಚುನಾಯಿತ ಪ್ರಧಾನಿಯಾಗಿ ಅತೀ ಹೆಚ್ಚುಕಾಲ ಆಡಳಿತ ನಡೆಸಿದ ದಾಖಲೆ ಹಿನ್ನೆಲೆಯಲ್ಲಿ ಕೃಷ್ಣ ಮಠದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಅಶೀರ್ವಚನ ನೀಡಿದರು.

ದಿವಾನ್​ ಡಾ. ಉದಯ್​ ಕುಮಾರ್​ ಸರಳತ್ತಾಯ, ಶಾಸಕ ಯಶ್ಪಾಲ್​ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಪ್ರಮುಖರಾದ ವೀಣಾ ಶೆಟ್ಟಿ, ಸುಪ್ರಸಾದ್​ ಶೆಟ್ಟಿ, ಮಧುಕರ ಮುದ್ರಾಡಿ, ಶ್ರೀಶ ನಾಯಕ್ , ಶ್ರೀಕಾಂತ್ ನಾಯಕ್, ದಿನಕರಶೆಟ್ಟಿ, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಸುಪ್ರಸಾದ್ ಶೆಟ್ಟಿ, ಮಹಿಳಾ ಮೋರ್ಚಾದ ಸಂಧ್ಯಾ ರಮೇಶ್, ನಯನಾ ಗಣೇಶ್, ವೀಣಾ ಶೆಟ್ಟಿ, ಪ್ರಜ್ಞಾ ಶೆಟ್ಟಿ, ಪದ್ಮಾ ರತ್ನಾಕರ್, ಅಜಿತ್ ಪೈ, ಶಾಮ್ ಪ್ರಸಾದ್ ಕುಡ್ವ ಉಪಸ್ಥಿತರಿದ್ದರು.