ಬೈಕ್ ಗೆ ಅಳವಡಿಸಿದ ಸಾಧನ 
ಉಡುಪಿ

ಬೈಕ್ ಸವಾರರ ಅಡ್ಡಗಟ್ಟಿ ಹಣ ಲೂಟಿ

ಉಪ್ಪಿನಂಗಡಿ: ಹೆದ್ದಾರಿಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ಬಳಿಕ ಅವರ ಬೈಕ್‌ಗಳಿಗೆ ಹೆಚ್ಚು ಮೈಲೇಜ್ ನೀಡುವ ಸಾಧನ ಅಳವಡಿಸುವುದಾಗಿ ತಿಳಿಸಿ ಅವರಿಂದ ಹಣ ಕಿತ್ತುಕೊಳ್ಳುವ ತಂಡವೊಂದು ಸಕ್ರಿಯವಾಗಿದ್ದು, ಈ ಕುರಿತು ಉಪ್ಪಿನಂಗಡಿ ಜನರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಅಂಡರ್‌ಪಾಸ್‌ನಲ್ಲಿ ಟೈಲರೊಬ್ಬರನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ಬಳಿಕ ಬೈಕ್‌ಗೆ ಮೈಲೇಜ್ ಸಾಧನ ಅಳವಡಿಸುವುದಾಗಿ ತಿಳಿಸಿ 1 ಸಾವಿರ ರೂ. ನೀಡಲು ತಿಳಿಸಿದ್ದಾನೆ. ಈ ವೇಳೆ ಬೈಕ್ ಸವಾರನೊಂದಿಗೆ ಆತ ವಾಗ್ವಾದಕ್ಕಿಳಿದಿದ್ದು, ಜನರು ಜಮಾಯಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಹಲವು ದ್ವಿಚಕ್ರ ವಾಹನ ಸವಾರರಿಗೆ ಇದೇ ರೀತಿ ವಂಚಿಸಲಾಗಿದ್ದು, ಉಪ್ಪಿನಂಗಡಿ ಪೊಲೀಸರು ಈ ಕುರಿತು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.