Theft 
ಉಡುಪಿ

ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು

ಉಪ್ಪಿನಂಗಡಿ: ಇಲ್ಲಿನ ಹಿರ್ತಡ್ಕ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳನ್ನು ಕಳ್ಳರು ಕದ್ದೊಯ್ದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಹಿರ್ತಡ್ಕ ನಿವಾಸಿ ಅಬ್ದುಲ್ ಅಜ್ಮಿ ಎಂಬುವರ ಹೀರೋ ಹೋಂಡಾ ಫ್ಯಾಶನ್ ಪ್ರೋ ಬೈಕ್ ಹಾಗೂ ಗ್ಲಾಮರ್ ಬೈಕ್ ಕಳವು ಆಗಿದ್ದು, ಮನೆ ಬಳಿಯ ಶೆಡ್‌ನಲ್ಲಿ ಇರಿಸಲಾಗಿದ್ದ ಬೈಕ್‌ಗಳನ್ನು ಕದ್ದೊಯಿದ್ದಾರೆಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.