ರಕ್ಷಿತಾ ಶೆಟ್ಟಿಯವರಿಗೆ ಹುಟ್ಟೂರು ಪಡುಬಿದ್ರಿಯಲ್ಲಿ ಅಭಿಮಾನಿಗಳಿಂದ ಅದ್ದೂರಿಯ ಸ್ವಾಗತ ದೊರೆಯಿತು.
ಪಡುಬಿದ್ರಿ: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿಯವರಿಗೆ ಹುಟ್ಟೂರು ಪಡುಬಿದ್ರಿಯಲ್ಲಿ ಅಭಿಮಾನಿಗಳಿಂದ ಬುಧವಾರ ಅದ್ದೂರಿಯ ಸ್ವಾಗತ ದೊರೆಯಿತು.
ಮಂಗಳೂರು ವಿಮಾನ ನಿಲ್ದಾಣದಿಂದ ಹುಟ್ಟೂರಿಗೆ ಆಗಮಿಸಿದ ಅವರನ್ನು ಹೆಜಮಾಡಿ ಟೋಲ್ ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಕ್ಷಿತಾ ಶೆಟ್ಟಿ ಕಾರಿನಲ್ಲಿ ಬರುತಿದ್ದಂತೆಯೇ ಅವರನ್ನು ಸುತ್ತುವರಿದ ಅಭಿಮಾನಿಗಳು ರಕ್ಷಿತಾ ಅವರಿಗೆ ಜಯಘೋಷ ಮೊಳಗಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಹೊರಟ ರ‌್ಯಾಲಿ
ರಾಷ್ಟ್ರೀಯ ಹೆದ್ದಾರಿ 66ರ ಕನ್ನಂಗಾರ್, ಬೀಡು ಮೂಲಕ ಪಡುಬಿದ್ರಿ ಪೇಟೆ ತಲುಪಿತು. ಹೆದ್ದಾರಿ ಉದ್ದಕ್ಕೂ ಸಾವಿರಾರು ಮಂದಿ ರಕ್ಷಿತ ಶೆಟ್ಟಿಗಾಗಿ ಕಾದು ಕುಳಿತಿದ್ದು, ಪಡುಬಿದ್ರಿ ಪೇಟೆಯಲ್ಲಿ ಜನಜಂಗುಲಿಯೇ ಸೇರಿತ್ತು.
ಊರಿನ ಜನರ ಅಭಿಮಾನ ನೋಡಿ ತುಂಬಾ ಖುಷಿಯಾಯಿತು ಎಂದರು
ಜಾಥಾದ ಉದ್ದಕ್ಕೂ ರಕ್ಷಿತಾ ಶೆಟ್ಟಿ ಸೇರಿದ್ದ ಜನತೆಗೆ ಕೈ ಬೀಸುತ್ತಾ ಚಂಡೆಯ ನಾದಕ್ಕೆ ನೃತ್ಯ ನಡೆಸಿದರು. ಅಭಿಮಾನಯೊಬ್ಬರು ತಂದಿದ್ದ ಬಂಗುಡೆ ಮೀನನ್ನು ಈ ವೇಳೆ ಪ್ರದರ್ಶಿಸುವ ಮೂಲಕ ಗಮನಸೆಳೆದರು. ರಾತ್ರಿಯ ವೇಳೆ ಪಡುಬಿದ್ರಿಯ ಬೇಂಗ್ರೆ ಎಂಡ್ ಪಾಯಿಂಟ್‌ನಲ್ಲಿರುವ ರಕ್ಷಿತಾ ಶೆಟ್ಟಿಯವರ ಮನೆ ಬಳಿ ಅದ್ದೂರಿಯಾಗಿ ಹುಟ್ಟೂರ ಸನ್ಮಾನ ನೆರೆವೇರಿತು.