ಸುಳ್ಯದ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿಪೂಜೆ ಮತ್ತು ಶಿಲಾನ್ಯಾಸ ನಡೆಯಿತು.
ಸುಳ್ಯ: ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಭೂಮಿಪೂಜೆ ಮತ್ತು ಶಿಲಾನ್ಯಾಸ ನಡೆಯಿತು. ದೇಲಂಪಾಡಿ ಗಣೇಶ ತಂತ್ರಿ ವೈದಿಕ ವಿಧಿ-ವಿಧಾನ ನೆರವೇರಿಸಿದರು. ಎಒಎಲ್‌ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಶಿಲಾನ್ಯಾಸ ನೆರವೇರಿಸಿದರು.
ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯವರು, ಭಕ್ತರು ಕಲ್ಲಿಗೆ ಹಾಲು ಮತ್ತು ಬೆಳ್ಳಿ-ಬಂಗಾರ, ನಾಣ್ಯ ಸಮರ್ಪಿಸಿದರು. ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಡಾ.ಗಿರೀಶ್ ಭಾರಧ್ವಾಜ್, ಕಾರ್ಯದರ್ಶಿ ಅಶೋಕ ಪ್ರಭು, ಕೋಶಾಧಿಕಾರಿ ಅವಿನಾಶ್ ಕುರುಂಜಿ, ರಾಮಚಂದ್ರ ಆಗ್ರೋ, ಎನ್.ಎ.ರಾಮಚಂದ್ರ, ಡಿ.ಎಸ್.ಗಿರೀಶ್ ದೇಂಗೋಡಿ, ಎಂ.ವೆಂಕಪ್ಪ ಗೌಡ, ಪ್ರಕಾಶ್ ಹೆಗ್ಡೆ, ಸೋಮನಾಥ ಪೂಜಾರಿ, ಭಾಸ್ಕರ ಐಡಿಯಲ್, ಚಂದ್ರಶೇಖರ, ಪ್ರಭಾಕರ ನಾಯರ್, ದೊಡ್ಡಣ್ಣ ಬರೆಮೇಲು, ಕೇಶವ ನಾಯಕ್, ಹರೀಶ್ ಬೂಡುಪನ್ನೆ, ಸತ್ಯಪ್ರಸಾದ್, ದಿನೇಶ್ ಮಡಪ್ಪಾಡಿ, ದಿನೇಶ್ ಕುಮಾರ್ ಕೆ.ಸಿ, ಸದಾನಂದ, ಪಿ.ಜಿ.ಜಯರಾಮ, ಮೋಹನ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು, ಜಯಕರ ಆಚಾರ್ಯ, ಶಿಲ್ಪಿ ವಿಜಯ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.