ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಟಕ ಸಹಯೋಗದಲ್ಲಿ ನಾವೆಯಲ್ಲೊಂದು ಕನ್ನಡ ಭಾವ ಸಂವಾದ ‘ಭಾವ ಸುಧಾ’ ದೋಣಿಯಾನ ಕಾರ್ಯಕ್ರಮ ನಡೆಯಿತು.
ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಟಕದ ಸಹಯೋಗದಲ್ಲಿ ನಾವೆಯಲ್ಲೊಂದು ಕನ್ನಡ ಭಾವ ಸಂವಾದ ‘ಭಾವ ಸುಧಾ’ ದೋಣಿಯಾನ ಕಾರ್ಯಕ್ರಮ ಮರವಂತೆ ಮಹಾರಾಜ ಸ್ವಾಮಿ ದೇಗುಲದ ಬಳಿಯ ಸೌಪರ್ಣಿಕಾ ನದಿಯಲ್ಲಿ ಶನಿವಾರ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಟಕ ಅಧ್ಯಕ್ಷ ಅರುಣ್ ಕುವಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಅವರು ಸೌಪರ್ಣಿಕಾ ನದಿಗೆ ಆರತಿ ಬೆಳಗಿ, ಕವನ ವಾಚನ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಹಾಬಲ ಕೆ.ಮರವಂತೆ, ಮಂಜುನಾಥ ದೇವಾಡಿಗ ಮೊಗೇರಿ, ಮಂಜುನಾಥ ಮರವಂತೆ, ದಿನೇಶ್ ಆಚಾರ್ಯ ಚೇಂಪಿ, ಮಂಜುನಾಥ ಗುಂಡ್ಮಿ, ಜಗದೀಶ ಉಪ್ಪುಂದ, ರಮೇಶ ನಾಯ್ಕ ಉಪ್ಪುಂದ, ದೀಕ್ಷಿತ್ ಆರ್.ನಾಯ್ಕ ಉಪ್ಪುಂದ ಕವನ ವಾಚಿಸಿದರು.
ಮಹಾಬಲ ಕೆ.ಮರವಂತೆ ಪ್ರಾರ್ಥಿಸಿದರು. ಮಂಜುನಾಥ ದೇವಾಡಿಗ ಮೊಗೇರಿ ಸ್ವಾಗತಿಸಿದರು. ರಮೇಶ ನಾಯ್ಕ ನಿರೂಪಿಸಿದರು. ದೋಣಿ ಪಯಣದ ಸಾರಥ್ಯವನ್ನ ‘ಶ್ರೀ ವರಾಹ ಬೋಟ್ ರೈಡರ್’ ದೋಣಿ ವಾಲೀಕ ರಾಜು ಪೂಜಾರಿ ವಹಿಸಿದ್ದರು.