ಕುಂದಾಪುರ:ಕೋಟೇಶ್ವರಶ್ರೀ ಪಟ್ಟಾಭಿ ರಾಮಚಂದ್ರದೇವಸ್ಥಾನದಲ್ಲಿ ನಡೆಯುತ್ತಿರುವಶ್ರೀ ಕಾಶೀ ಮಠಾಧೀಶ ಸಂಯಮೀಂದ್ರತೀರ್ಥ ಶ್ರೀಪಾದರ ಚಾತುರ್ಮಾಸ್ಯಹಾಗೂ ಶ್ರೀ ಕಾಶೀ ಮಠದ ಸದ್ಗುರುಶ್ರೀಮದ್ ಸುಧೀಂದ್ರ ತೀರ್ಥಶ್ರೀಪಾದರ ಜನ್ಮ ಶತಮಾನೋತ್ಸವಆಚರಣೆಯ ಅಂಗವಾಗಿ ಹಮ್ಮಿಕೊಂಡಶತ ನಮನ ಶತ ಸ್ಮರಣ ಶತ ದಿವಸ ಅಖಂಡಭಜನ ಕಾರ್ಯಕ್ರಮ ಶುಕ್ರವಾರಸಂಪನ್ನಗೊಂಡಿತು.
ಮಂಗಲೋತ್ಸವದಪ್ರಯುಕ್ತ ಮಧ್ಯಾಹ್ನ ಶ್ರೀವೇದವ್ಯಾಸ ದೇವರಿಗೆ ನೂರು ದೀಪಗಳಸಮರ್ಪಣೆ,ಗುರುವರ್ಯರಿಂದಶ್ರೀ ವಿಠ್ಠಲ ರಖುಮಾಯಿ ದೇವರಪೂಜೆ ಹಾಗೂ ಶ್ರೀಮದ್ ಸುಕೃತೀಂದ್ರಹಾಗೂ ಸುಧೀಂದ್ರ ತೀರ್ಥ ಗುರುವರ್ಯರಪಾದುಕಾ ಪೂಜೆ ನಡೆಯಿತು.ದೀಪವಿಸರ್ಜನೆಯ ಮೂಲಕ ಅಖಂಡ ಭಜನೆಸಂಪನ್ನಗೊಂಡಿತು.ಸಂಜೆರಜತ ಪುಷ್ಪ ರಥದಲ್ಲಿ ಶ್ರೀ ಸುಧೀಂದ್ರತೀರ್ಥರ ಭಾವಚಿತ್ರ ಇರಿಸಿ ನಗರಭಜನೆ ನಡೆಯಿತು.
ಬಾಕ್ಸ್
ಹೊರರಾಜ್ಯಗಳ ತಂಡದಿಂದಲೂ ಸೇವೆ
ಶ್ರೀಕಾಶಿ ಮಠದ ಇತಿಹಾಸದಲ್ಲೇ ಪ್ರಪ್ರಥಮಬಾರಿಗೆ ಸಂಸ್ಥಾನದ ಪಟ್ಟ ದೇವರಾದಶ್ರೀವ್ಯಾಸ ರಘುಪತಿ ನರಸಿಂಹದೇವರ ಸನ್ನಿಧಿಯಲ್ಲಿ ಜುಲೈ 17ರಂದುಸಂಯಮೀಂದ್ರ ತೀರ್ಥ ಸ್ವಾಮೀಜಿದೀಪ ಪ್ರಜ್ವಲನೆಯ ಮೂಲಕ ಶತ ದಿನಅಖಂಡ ಭಜನಾ ಮಹೋತ್ಸವಕ್ಕೆ ಚಾಲನೆನೀಡಿದ್ದರು.ನೂರುದಿನಗಳ ಕಾಲ ಉಡುಪಿ,ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆಗೋವಾ,ಕೇರಳ,ಮಹಾರಾಷ್ಟ್ರದಿಂದಲೂಭಜನಾ ಮಂಡಳಿಗಳು ಆಗಮಿಸಿ ನಿರಂತರವಾಗಿಭಜನಾ ಸೇವೆ ನೀಡಿದವು.ಸಮಾಜದಮೇರು ಕಲಾವಿದರು,ಉದಯೋನ್ಮುಖಪ್ರತಿಭೆಗಳು,ಆಹ್ವಾನಿತಅತಿಥಿ ಕಲಾವಿದರು ಭಾಗವಹಿಸಿದ್ದರು.