ಉಡುಪಿ ತೆಂಕಪೇಟೆಯ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀದೇವಿ-ಭೂದೇವಿ ಸಹಿತ ವಿಶೇಷ ಅಲಂಕಾರ ಮಾಡಲಾಗಿತ್ತು. ಭಜನಾ ಮಂಗಲೋತ್ಸವದ ನಿಮಿತ್ತ ಭಕ್ತರು ಉರುಳು ಸೇವೆ ಸಲ್ಲಿಸಿದರು. 
ಉಡುಪಿ

ಭಜನಾ ಮಂಗಳೋತ್ಸವ; ಭಕ್ತರಿಂದ ಉರುಳು ಸೇವೆ

* ಶ್ರೀದೇವಿ-ಭೂದೇವಿ ಸಹಿತ ಲಕ್ಷ್ಮೀ ವೆಂಕಟೇಶವಿಗೆ ವಿಶೇಷ ಅಲಂಕಾರ

ಉಡುಪಿ: ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಡೆಯುತ್ತಿದ್ದ 126ನೇ ವರ್ಷದ ಭಜನಾ ಮಹೋತ್ಸವ 8 ದಿನಗಳ ಕಾಲ ಅಹೋರಾತ್ರಿ ನಡೆದು ಮಂಗಳವಾರ ಸಂಪನ್ನಗೊಂಡಿತು. ತನ್ನಿಮಿತ್ತ ಶ್ರೀದೇವಿ-ಭೂದೇವಿ ಸಹಿತ ಲಕ್ಷ್ಮೀ ವೆಂಕಟೇಶ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಭಜನಾ ಮೊಹೋತ್ಸವದ ವಿಠೋಬಾ ರುಕುಮಾಯಿ ದೇವರಿಗೆ ಆರತಿ ಬೆಳಗಿ ಮಂಗಲೋತ್ಸವಕ್ಕೆ ಚಾಲನೆ ನೀಡಲಾಯಿತು. ಅರ್ಚಕ ದಯಾಘನ್​ ಭಟ್​ ಪೂಜಾ ವಿಧಾನ ನೆರವೇರಿಸಿದರು.

ಶ್ರೀದೇವರ ಉತ್ಸವ ಮೂರ್ತಿಯ ಸಮ್ಮುಖದಲ್ಲಿ ನೂರಾರು ಭಕ್ತರು ಜೈ ವಿಠ್ಠಲ, ಹರಿ ವಿಠ್ಠಲ ಸ್ಮರಣೆ ಮಾಡುತ್ತ ದೇವಳದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಉರುಳು ಸೇವೆ ಸಲ್ಲಿಸಿದರು.

ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರು ಸತೀಶ್​ ಕಿಣಿ, ದೇವಳದ ಧರ್ಮದರ್ಶಿ ಗುಜ್ಜಾಡಿ ಪ್ರಭಾಕರ್​ ನಾಯಕ್​, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ದೀಪಕ್​ ಭಟ್​, ಗಿರೀಶ್​ ಭಟ್​, ವಿವೇಕಾನಂದ ಶಾನಭೋಗ್​, ಭಾಸ್ಕರ್​ ಶೆಣೈ, ಉಮೇಶ್​ ಪೈ, ಗಣೇಶ್​ ಕಿಣಿ, ನರಸಿಂಹ ಕಿಣಿ, ಪ್ರಭಾಕರ್​ ಭಟ್​, ಜಿಎಸ್​ಬಿ ಯುವಕ ಮಂಡಳಿ ಸದಸ್ಯರು, ಭಗಿನಿ ವೃಂದ, ಮಹಿಳಾ ಮಂಡಳಿ ಸದಸ್ಯರು, ಭಜನಾ ಮಹೋತ್ಸವ ಸಮಿತಿ ಸದಸ್ಯರು ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು.