ಉಡುಪಿ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಭಜನೋತ್ಸವವನ್ನು ಡಾ. ನಿ.ಬೀ. ವಿಜಯ ಬಲ್ಲಾಳ ಉದ್ಘಾಟಿಸಿದರು. ಯಶ್​ಪಾಲ್​ ಸುವರ್ಣ, ವಿಜಯ್​ ಶೆಟ್ಟಿ ಕೊಂಡಾಡಿ, ಬಿ.ನಾಗರಾಜ್​ ಶೆಟ್ಟಿ, ರಾಜೇಂದ್ರಕುಮಾರ್​ ಬಸ್ರೂರು, ಗೋಪಾಲ್​ ಸಿ. ಬಂಗೇರ, ವಜ್ರಾಕ್ಷಿ ಪಿ. ದಾಸ್​, ಶಿವಕುಮಾರ್​ ಅಂಬಲಪಾಡಿ, ರಾಜೇಂದ್ರ ಪಂದುಬೆಟ್ಟು, ರಾಜು ಪೂಜಾರಿ, ಸುರೇಂದ್ರ ನಾಯ್ಕ್​ ಇತರರಿದ್ದರು. 
ಉಡುಪಿ

ಮನೆ-ಮನಗಳಲ್ಲಿ ಮೊಳಗಲಿ ಭಜನೆ

* ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಆಶಯ

* ಧರ್ಮಸ್ಥಳ ಪರಿಷತ್​ನ 'ಭಜನೋತ್ಸವ' ಉದ್ಘಾಟನೆ

ಉಡುಪಿ: ದಾಸವರೇಣ್ಯರು ರಚಿಸಿರುವ ಭಜನೆಗಳು ವೇದ, ಉಪನಿಷತ್​ಗಳ ಸತ್ವಗಳೊಂದಿಗೆ ತತ್ವಾದರ್ಶ ಸಾರುವ ಅತ್ಯಮೂಲ್ಯ ಕೃತಿಯಾಗಿದೆ. ಮಾನಸಿಕ ನೆಮ್ಮದಿ ಮತ್ತು ಭಗವಂತನ ಸಾಕ್ಷಾತ್ಕಾರಕ್ಕೆ ರಹದಾರಿಯೂ ಆಗಿದೆ. ಇಂದಿನ ಒತ್ತಡ ನಿವಾರಿಸಿ, ಸುಲಭವಾಗಿ ಏಕಾಗ್ರತೆ ಸಿದ್ಧಿಸುವ ಭಜನೆ ಮನೆ-ಮನಗಳಲ್ಲಿ ಮೊಳಗುವಂತಾಗಲಿ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಆಶಿಸಿದರು.
ಉಡುಪಿ ಅಂಬಲಪಾಡಿ ದೇವಳದ ಶ್ರೀ ಭವಾನಿ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ನ ಉಡುಪಿ ತಾಲೂಕು ಘಟಕದ ವತಿಯಿಂದ ಭಾನುವಾರ (ಆ.2) ಆಯೋಜಿಸಿದ್ದ 'ಭಜನೋತ್ಸವ-2026' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಜನಾ ಪರಿಷತ್​ ಉಡುಪಿ ತಾಲೂಕು ಅಧ್ಯಕ್ಷ ವಿಜಯ್​ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆ ವಹಿಸಿದ್ದರು.

ಎಸ್​ಕೆಡಿಆರ್​ಪಿ ಬಿ.ಸಿ. ಟ್ರಸ್ಟ್​ (ರಿ.) ಉಡುಪಿ ಜಿಲ್ಲಾ ನಿರ್ದೇಶಕ ಬಿ.ನಾಗರಾಜ್​ ಶೆಟ್ಟಿ, ಭಜನಾ ಪರಿಷತ್​ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ್​ ಬಸ್ರೂರು, ಮಲ್ಪೆ ವಿಠೋಬ ಭಜನಾ ಮಂದಿರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ್​ ಸಿ. ಬಂಗೇರ, ಉಡುಪಿ ತಾಪಂ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಜನ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ರಾಜು ಪೂಜಾರಿ, ಎಸ್​ಕೆಡಿಆರ್​ಪಿ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್​, ಭಜನಾ ಪರಿಷತ್​ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್​., ಸುಬ್ರಹ್ಮಣ್ಯ ಆಚಾರ್ಯ ಹಿರಿಯಡ್ಕ ಉಪಸ್ಥಿತರಿದ್ದರು.

ಪರಿಷತ್​ ತಾಲೂಕು ಉಪಾಧ್ಯಕ್ಷೆ ವಜ್ರಾಕ್ಷಿ ಪಿ. ದಾಸ್​, ವಲಯಗಳ ಸಂಯೋಜಕರಾದ ಪ್ರದೀಪ್​ ಕುಮಾರ್​, ಲತಾ ನಾಯ್ಕ್​, ರೂಪಾಶ್ರೀ, ಶೋಭಾ ಪೂಜಾರಿ, ಯೋಜನೆಯ ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರಭಾವತಿ, ಸೇವಾ ನಿರತೆ ಹೇಮಾ, ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್​, ಒಕ್ಕೂಟದ ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು.

ಪರಿಷತ್​ನ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು. ಉಪನ್ಯಾಸಕಿ ನಳಿನಾ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ತಾಲೂಕಿನಾದ್ಯಂತ 50ಕ್ಕೂ ಅಧಿಕ ಭಜನಾ ಮಂಡಳಿಗಳ 750ಕ್ಕೂ ಹೆಚ್ಚು ಭಜಕರು ಭಜನೋತ್ಸವದ ಕುಣಿತ ಭಜನೆಯಲ್ಲಿ ಪಾಲ್ಗೊಂಡಿದ್ದರು.

"

ಕೆಟ್ಟ ಮನಸ್ಥಿತಿಯ ಕೆಲವರು ಯುವ ಜನತೆಯ ದಾರಿ ತಪ್ಪಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸದೃಢ ಮನಸ್ಥಿತಿಗೆ ಭಜನೆಯೊಂದೇ ಪರಿಹಾರ ಮಾರ್ಗ. ವಿದ್ಯಾರ್ಥಿ ಸಹಿತ ಎಲ್ಲ ವಯೋಮಾನದವರು ನಾಡಿನ ಭವ್ಯ ಪರಂಪರೆ ಮತ್ತು ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಹಾಗೂ ಮೌಲ್ಯಾಧಾರಿತ ಭಜನೆಗಾಗಿ ಸಮಯ ಮೀಸಲಿಡಬೇಕು. ಭಜನಾ ಸಂಸ್ಕೃತಿಯ ವೈಭವ ಮರುಕಳಿಸುವಂತಾಗಲಿ.

— ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.