ಉಡುಪಿಯಲ್ಲಿ ಬಿಜೆಪಿ ಜಿಲ್ಲಾ ಎಸ್​ಟಿ ಮೋರ್ಚಾ ವತಿಯಿಂದ ಭಗವಾನ್​ ಬಿರ್ಸಾ ಮುಂಡಾ ಜನ್ಮದಿನ ಆಚರಿಸಲಾಯಿತು. ಕುತ್ಯಾರು ನವೀನ ಶೆಟ್ಟಿ, ಭುಜಂಗ ನಾಯ್ಕ, ಸತ್ಯಾನಂದ ನಾಯಕ, ಶಿವಕುಮಾರ ಅಂಬಲಪಾಡಿ, ನಾರಾಯಣ ನಾಯ್ಕು, ರಾಮ ನಾಯ್ಕ, ರೇವತಿ ನಾಯ್ಕ ಇತರರಿದ್ದರು. 
ಉಡುಪಿ

ಬಿರ್ಸಾ ಮುಂಡಾ ಜೀವನಗಾಥೆ ಪ್ರೇರಣಾದಾಯಕ

* ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಅನಿಸಿಕೆ

* ಜಿಲ್ಲಾ ಎಸ್​ಟಿ ಮೋರ್ಚಾದಿಂದ 151ನೇ ಜನ್ಮದಿನಾಚರಣೆ

ಉಡುಪಿ: ಬುಡಕಟ್ಟು ಜನಾಂಗದ ಅಸ್ತಿತ್ವ, ಬಡತನ, ಅಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದವರು ಭಗವಾನ್​ ಬಿರ್ಸಾ ಮುಂಡಾ. ಅವರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರ ಬಲಿದಾನವನ್ನು ಆರಂಭದಿಂದಲೇ ಈ ದೇಶವನ್ನಾಳಿದ ಕಾಂಗ್ರೆಸ್​ ಮರೆಮಾಚಿದೆ. ಸ್ವಾಭಿಮಾನಿ ಭಾರತ ನಿರ್ಮಾಣಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಿರ್ಸಾ ಅವರ ಜೀವನಗಾಥೆ ಸದಾ ಪ್ರೇರಣಾದಯಕ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಹೇಳಿದರು.

ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್​ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕ್ರಾಂತಿಕಾರಿ ಹೋರಾಟಗಾರ ಭಗವಾನ್​ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಎಸ್​ಟಿ ಮೋರ್ಚಾ ಅಧ್ಯಕ್ಷ ಭುಜಂಗ ನಾಯ್ಕ ಮಾತನಾಡಿ ಭಗವಾನ್​ ಬಿರ್ಸಾ ಮುಂಡಾ ಅವರ ಹೋರಾಟ ಮತ್ತು ಸಾಧನೆ ವಿವರಿಸಿದರು. ದೇಶದಲ್ಲಿ ನಕ್ಸಲ್​ ನಿಮೂರ್ಲನೆಯ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ದೇಶಾದ್ಯಂತ ಬಿರ್ಸಾ ಮುಂಡಾ ಜನ್ಮದಿನ ಆಚರಿಸಲಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ, ಜಿಲ್ಲಾ ಎಸ್​ಟಿ ಮೋರ್ಚಾ ಉಪಾಧ್ಯಕ್ಷರಾದ ನಾರಾಯಣ ನಾಯ್ಕು, ರಾಮ ನಾಯ್ಕ, ರೇವತಿ ನಾಯ್ಕ, ಕಾರ್ಯದರ್ಶಿಗಳಾದ ನವೀನ್​ ನಾಯ್ಕ, ಸುಜಾತಾ ನಾಯ್ಕ, ಕಾರ್ಯಕಾರಿಣಿ ಸದಸ್ಯರಾದ ದಯಾನಂದ ನಾಯ್ಕ, ಸುರೇಂದ್ರ ನಾಯ್ಕ, ಸಂದೀಪ ನಾಯ್ಕ, ಗೀತಾ ನಾಯ್ಕ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಎಸ್​ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ನಾಯ್ಕ ನೂಜಿನಬೈಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸುಭಾಷ ನಾಯ್ಕ ಪೆರ್ಡೂರು ವಂದಿಸಿದರು.