ಮಜೂರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ವಾತನಾಡಿದರು. ಮಂಜುಳಾ ಆಚಾರ್ಯ, ವಿಲಾಸಿನಿ, ಸುಗುಣಾ ಮತ್ತಿತರರಿದ್ದರು.  
ಉಡುಪಿ

ಐದು ವರ್ಷದಲ್ಲಿ ಗ್ರಾಮಸ್ಥರಿಗೆ ಉತ್ತಮ ಸೇವೆ

ಪಡುಬಿದ್ರಿ: ಗ್ರಾಮಸ್ಥರಿಗೆ 5 ವರ್ಷದ ಆಡಳಿತ ಅವಧಿಯಲ್ಲಿ ಉತ್ತಮ ಸೇವೆ ನೀಡಿದ್ದೇವೆ. ಸರ್ವ ಸದಸ್ಯರ ಪರಸ್ಪರ ಒಮ್ಮತದ ನಿರ್ಧಾರದಿಂದ ಅನೇಕ ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಹೇಳಿದರು.
ಮಜೂರು ಗ್ರಾಪಂ ಸಭಾಭವನದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ವಾತನಾಡಿದರು.
2025-26ನೇ ಸಾಲಿನ ಶೇ.25 ಪ.ಜಾತಿ, ಪ.ಪಂಗಡ ಮೀಸಲು ನಿಧಿಯಡಿ ಮತ್ತು ಶೇ.5 ವಿಕಲಚೇತನ ನಿಧಿಯಡಿ 116 ಕುಟುಂಬಗಳಿಗೆ ಒಟ್ಟು 5.80 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಹೋಂ ಲೈಟ್ ಸಿಸ್ಟಮ್‌ನ್ನು ಫೆ.13ರಂದು ಸಾಂಕೇತಿಕವಾಗಿ ವಿತರಣೆ ವಾಡಲಾಗುವುದು ಎಂದು ತಿಳಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಸದಸ್ಯರಾದ ಸಂದೀಪ್, ಸಹನಾ ತಂತ್ರಿ, ಶರ್ಮಿಳಾ ಆಚಾರ್ಯ, ಮಧುಸೂದನ್ ಸಾಲ್ಯಾನ್, ವಿಜಯ್ ಧೀರಜ್, ವನಿತಾ, ಜ್ಯೋತಿ, ಭಾಸ್ಕರ, ರೂಪಾ, ಜಿತೇಶ್ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲಾಸಿನಿ ಉಪಸ್ಥಿತರಿದ್ದರು. ವಾರ್ಗದರ್ಶಿ ಅಧಿಕಾರಿ ಸುಗುಣಾ ಪ್ರಾಸ್ತಾವಿಕವಾಗಿ ವಾತನಾಡಿದರು. ಕಾರ್ಯದರ್ಶಿ ಪ್ರಸಾದ್ ಭಂಡಾರಿ ವಂದಿಸಿದರು.

ಜಲ್ಲಿ ಕ್ರಷರ್‌ಗೆ ವಿರೋಧ

ಪಾದೂರು ಗ್ರಾಮದಲ್ಲಿ ಜಲ್ಲಿ ಕ್ರಷರ್ ಸ್ಥಾಪನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಗ್ರಾಮಸ್ಥರ ಜತೆ ಇರುವುದಾಗಿ ಗ್ರಾಪಂ ಸದಸ್ಯರು ಭರವಸೆ ನೀಡಿದರು. ಚಿರತೆ ಮತ್ತು ಮಂಗಗಳ ಹಾವಳಿ, 92 ಹೇರೂರು ಪ್ಲಾಟಿಂಗ್ ಸಮಸ್ಯೆ ಬಗ್ಗೆ ರಾತ್ರಿ ವೇಳೆ ಪೊಲೀಸ್ ಗಸ್ತು ವ್ಯವಸ್ಥೆ ವಾಡುವಂತೆ ಹಾಗೂ ರಾತ್ರಿ ವೇಳೆ ಲೋಡ್ ಶೆಡ್ಡಿಂಗ್ ಮಾಡದಂತೆ ಆಗ್ರಹಿಸಿದರು. ಮೆಸ್ಕಾಂ, ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಶುಸಂಗೋಪನೆ, ಕಂದಾಯ, ಅರಣ್ಯ, ನರೇಗಾ ಯೋಜನೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.