ಉಡುಪಿ ಜಿಲ್ಲಾ ಮಟ್ಟದ 'ಉತ್ತಮ ಶಿಕ್ಷಕ' ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ 16 ಶಿಕ್ಷಕರು.
* ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಮಾಹಿತಿ
ಉಡುಪಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನಿಮಿತ್ತ ಉಡುಪಿ ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಒಟ್ಟು 16 ಶಿಕ್ಷಕರು ಜಿಲ್ಲಾ ಮಟ್ಟದ 'ಉತ್ತಮ ಶಿಕ್ಷಕ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಡುಪಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಆಡಳಿತ ಉಪನಿರ್ದೇಶಕ ಲೋಕೇಶ್ ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ
ಬೈಂದೂರು ತಾಲೂಕಿನ ಸಾಲಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಗಣೇಶ್, ಬ್ರಹ್ಮಾವರ ತಾಲೂಕಿನ ಆಲಡ್ಕ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ರವಿ, ಕುಂದಾಪುರ ತಾಲೂಕಿನ ಮೂರು ಕೈ ಆಲ್ಬಾಡಿಯ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಉಷಾಕುಮಾರಿ, ಟಿ.ಟಿ. ರೋಡ್ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಲೀಲಾವತಿ ನಾಯ್ಕ್, ಉಡುಪಿ ತಾಲೂಕಿನ ವಳಕಾಡು ಸ.ಮಾ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಸುಹಾಸಿನಿ, ಕಾರ್ಕಳ ತಾಲೂಕಿನ ಹೆಮುರ್ಂಡೆ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಶ್ರೀಕಾಂತ್ ಭಟ್.
ಹಿರಿಯ ಪ್ರಾಥಮಿಕ ವಿಭಾಗ
ಬ್ರಹ್ಮಾವರ ತಾಲೂಕಿನ 52ನೇ ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಂಜುಳಾ ಜಯಕರ್, ಕುಂದಾಪುರ ತಾಲೂಕಿನ ನೂಜಾಡಿ-2 ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶೈಲಜಾ ಶೆಟ್ಟಿ, ಬೀಜಾಡಿ-ಪಡು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಎಂ., ಕಾರ್ಕಳ ತಾಲೂಕಿನ ಕಲ್ಯಾ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ವೀಣಾ ಆರ್., ಉಡುಪಿ ತಾಲೂಕಿನ ಪಡು-ಅಲೆವೂರಿನ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸತೀಶ್ಚಂದ್ರ.
ಪ್ರೌಢಶಾಲಾ ವಿಭಾಗ
ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಸಹ ಶಿಕ್ಷಕ ಕೃಷ್ಣ ಶೆಟ್ಟಿ, ಬೈಂದೂರು ತಾಲೂಕಿನ ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಸಹ ಶಿಕ್ಷಕ ರವಿರಾಜ್ ಶೆಟ್ಟಿ, ಕಾರ್ಕಳ ತಾಲೂಕಿನ ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್. ನಾರಾಯಣ್ ಶೆಣೈ, ಉಡುಪಿ ತಾಲೂಕಿನ ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ, ಕುಂದಾಪುರ ತಾಲೂಕಿನ ಬಸ್ರೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪಿಯೂಷ್ ಡಿಸೋಜ.