ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು.
* ವಾಣಿಜ್ಯದಲ್ಲಿ ಆದರ್ಶ್, ಕಲಾ ವಿಭಾಗದಲ್ಲಿ ಹನಮವ್ವ ಪ್ರಥಮ
ಉಡುಪಿ: ತಾಲೂಕಿನ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.-97.01 ಫಲಿತಾಂಶ ದಾಖಲಿಸುವ ಮೂಲಕ ಗಮನ ಸೆಳೆದಿದೆ.
ವಾಣಿಜ್ಯ ವಿಭಾಗ ಶೇ.95.07 ಹಾಗೂ ಕಲಾ ವಿಭಾಗ ಶೇ.100 ಫಲಿತಾಂಶ ಸಾಧಿಸಿದೆ. ಡಿಸ್ಟಿಂಕ್ಷನ್ನಲ್ಲಿ -12 ವಿದ್ಯಾರ್ಥಿಗಳು, ಪ್ರಥಮ 37, ದ್ವಿತೀಯ 11 ಹಾಗೂ ತೃತೀಯ ಸ್ಥಾನದಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಷಯವಾರು ಫಲಿತಾಂಶದಲ್ಲಿ ಕನ್ನಡ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರದಲ್ಲಿ ಶೇ.100 ಸಾಧನೆ ಮಾಡಿದೆ. ಇಂಗ್ಲಿಷ್ ಶೇ.98, ಅರ್ಥಶಾಸ್ತ್ರ ಶೇ.97 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಆದರ್ಶ್ (589) ಪ್ರಥಮ ಸ್ಥಾನ, ಕಾರ್ತಿಕ್ ಪೂಜಾರಿ (567) ದ್ವಿತೀಯ, ಟಿ.ವೈಷ್ಣವಿ ಪೈ (562) ತೃತೀಯ ಹಾಗೂ ಕಲಾ ವಿಭಾಗದಲ್ಲಿ ಹನಮವ್ವ (557) ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಕಾಲೇಜ್ನ ಪ್ರಾಂಶುಪಾಲ ವಿಶ್ವನಾಥ್ ಕೆ. ತಿಳಿಸಿದ್ದಾರೆ.