ಅಂಗಳ ಕಾರ್ಯಕ್ರಮದಲ್ಲಿ ಬೋಧಾಯನ ಶರ್ಮ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪಾಂಡುರಂಗ ಪೈ ಸಿದ್ದಾಪುರ, ಗುರುರಾಜ್ ಆಚಾರ್ಯ ಕೆ.ಜೆ., ಅನಿತಾ, ಸೌಮ್ಯಾ, ಭಾಸ್ಕರ್ ಶರ್ಮ ಬಳ್ಳಾರಿ, ಶಕುಂತಲ ಶರ್ಮ ಬಳ್ಳಾರಿ ಉಪಸ್ಥಿತರಿದ್ದರು. 
ಉಡುಪಿ

ಶೈಕ್ಷಣಿಕ ಸಂಯೋಜನೆಯಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ

Samiksha Sadananda Poojary

ಪ್ರಮುಖ ಮುಖ್ಯಾಂಶಗಳು

  • ಅಂಗಳ ಸಮಾರಂಭ
  • ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಹೆಬ್ರಿ: ವಿದ್ಯಾ ಭಾರತಿ ಜತೆಗೆ ಶೈಕ್ಷಣಿಕ ಸಂಯೋಜನೆಗೊಂಡ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಯೋಜನಗಳಿವೆ. ವಿಜ್ಞಾನ ಮೇಳ, ಕ್ರೀಡಾಕೂಟ ಪ್ರತಿಭಾನ್ವಿತರಿಗೆ ಸನ್ಮಾನ, ಶೈಕ್ಷಣಿಕ ಸ್ಪರ್ಧಾ ಚಟುವಟಿಕೆಗಳು ಲಭಿಸುತ್ತವೆ. ಆದ್ದರಿಂದ ಹೆಚ್ಚು ಹೆಚ್ಚು ಶಾಲೆಗಳು ವಿದ್ಯಾ ಭಾರತಿಗೆ ಶೈಕ್ಷಣಿಕವಾಗಿ ಸಂಯೋಜನೆ ಮಾಡುವಲ್ಲಿ ಗಮನ ಹರಿಸಬೇಕು ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ ಹೇಳಿದರು.
ವಿದ್ಯಾ ಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ವತಿಯಿಂದ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಠ ಮಹಾಸಂಸ್ಥಾನ್ ಸರಸ್ವತಿ ಪೀಠದಲ್ಲಿ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ‘ಅಂಗಳ-2026’ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ವಿದ್ಯಾರ್ಥಿ ಬೋಧಾಯನ ಶರ್ಮ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು. ಆನೆಗುಂದಿ ಮಠದ ದಿವಾನ ಲೋಲಾಕ್ಷ ಶರ್ಮ, ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಟ್ರಸ್ಟ್ ಕಾರ್ಯದರ್ಶಿ ಗುರುರಾಜ್ ಆಚಾರ್ಯ ಕೆ.ಜೆ., ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಮುಖ್ಯಶಿಕ್ಷಕಿ ಅನಿತಾ, ಉಪ ಮುಖ್ಯಶಿಕ್ಷಕಿ ಸೌಮ್ಯಾ, ವಿದ್ಯಾರ್ಥಿಯ ತಂದೆ ಭಾಸ್ಕರ್ ಶರ್ಮ ಬಳ್ಳಾರಿ, ತಾಯಿ ಶಕುಂತಲ ಶರ್ಮ ಬಳ್ಳಾರಿ ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಗುರುರಾಜ್ ಆಚಾರ್ಯ ಕೆ.ಜೆ. ಸ್ವಾಗತಿಸಿದರು. ವಿದ್ಯಾ ಭಾರತಿ ಕರ್ನಾಟಕ ಉಡುಪಿ ಕಾರ್ಯದರ್ಶಿ ಮಹೇಶ ಹೈಕಾಡಿ ಚಾರ ಕಾರ್ಯಕ್ರಮ ನಿರೂಪಿಸಿದರು.