ಬೆಳ್ಮಣ್ ಪೆಟ್ರೋಲ್ ಪಂಪ್ ಹಾಗೂ ಪೆರಲ್‌ಪಾದೆ ನಡುವಿನ ಅಪಾಯಕಾರಿ ತಿರುವಿನಲ್ಲಿ ಸೂಚನಾ ಫಲಕ ಅಳವಡಿಸಿರುವುದು. 
ಉಡುಪಿ

ಬೆಳ್ಮಣ್-ಪೆರಲ್‌ಪಾದೆ ತೂಗುಗತ್ತಿ!

ಇಂದಿರಾ ಎನ್ ಕೆ
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಬೆಳ್ಮಣ್ ಪೆಟ್ರೋಲ್ ಪಂಪ್ ಹಾಗೂ ಪೆರಲ್‌ಪಾದೆ ನಡುವಿನ ಅಪಾಯಕಾರಿ ತಿರುವೊಂದು ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತಿದೆ. ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಅಪಘಾತಗಳು ಈ ಭಾಗದಲ್ಲಿ ನಡೆದಿದ್ದು, ಈ ಭಾಗದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವ ಅಗತ್ಯವಿದೆ.
ಕಳೆದ ಕೆಲವು ವರ್ಷಗಳಿಂದ ಈ ತಿರುವು ವಾಹನ ಸವಾರರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಈ ಹಿಂದೆ ಇದೇ ತಿರುವಿನಲ್ಲಿ ನಡೆದ ಭೀಕರ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಗಂಡ, ಹೆಂಡತಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟ ಟನೆ ಇಂದಿಗೂ ಸ್ಥಳೀಯರ ಮನಸ್ಸಿನಲ್ಲಿ ಹಸಿರಾಗಿದೆ. ಆ ಟನೆ ಬಳಿಕವೂ ಇಲ್ಲಿ ಅಪಘಾತಗಳ ಸರಣಿ ನಿಂತಿಲ್ಲ. ನಿರಂತರ ಒಂದಲ್ಲ ಒಂದು ಅಪಘಾತಗಳು ನಡೆಯುತ್ತಲೇ ಇದೆ.
ಇತ್ತೀಚೆಗಷ್ಟೇ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಪಾದಚಾರಿಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನ ಮರಕ್ಕೆ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಕೆಲವೇ ದಿನಗಳ ಅಂತರದಲ್ಲಿ ರಾತ್ರಿ ವೇಳೆ ಗೂಡ್ಸ್ ವಾಹನವೊಂದು ಪಲ್ಟಿಯಾಗಿ ಸಮೀಪದಲ್ಲಿರುವ ಅರಣ್ಯಾಧಿಕಾರಿಗಳ ಕ್ವಾಟ್ರರ್ಸ್ ಬಳಿಗೆ ಉರುಳಿ ಬಿದ್ದು ಸವಾರ ಗಾಯಗೊಂಡಿದ್ದು, ಭಾರಿ ಆತಂಕ ಸೃಷ್ಟಿಸಿತ್ತು. ಈ ಸರಣಿ ದುರಂತಗಳು ರಸ್ತೆ ವಿನ್ಯಾಸದ ಲೋಪವೋ ಅಥವಾ ಚಾಲಕರ ಅಜಾಗರೂಕತೆಯೋ ಎಂಬ ಚರ್ಚೆಯನ್ನು ಸಾರ್ವಜನಿಕರಲ್ಲಿ ಹುಟ್ಟುಹಾಕುತ್ತಲೇ ಇವೆ.

ನಿಯಂತ್ರಣ ತಪ್ಪಿ ಅವಘಡ

ಬೆಳ್ಮಣ್‌ನಿಂದ ಪಡುಬಿದ್ರಿ ಸಾಗುವ ಇಲ್ಲಿನ ಪೆಟ್ರೋಲ್ ಪಂಪ್ ಬಳಿಯಲ್ಲಿರುವ ಈ ತಿರುವು ವೇಗವಾಗಿ ಬರುವ ವಾಹನ ಸವಾರರ ನಿಯಂತ್ರಣವನ್ನು ತಪ್ಪಿಸುವಂತಿದೆ. ಈಗಾಗಲೇ ನಿಯಂತ್ರಣವನ್ನು ಕಳೆದುಕೊಂಡ ಸಾಕಷ್ಟು ವಾಹನಗಳು ಅಪಘಾತಕ್ಕೀಡಾಗಿ ಅನೇಕ ಸಾವು ನೋವುಗಳು ಸಂಭವಿಸುತ್ತಲೇ ಇವೆ.

ಸೂಚನಾ ಫಲಕ ಅಳವಡಿಕೆ

ಮುಖ್ಯರಸ್ತೆಯ ಅಪಾಯಕಾರಿ ತಿರುವು ಈಗ ಮೃತ್ಯುಪಂಜವಾಗಿ ವಾರ್ಪಟ್ಟಿದೆ. ಹತ್ತಾರು ಸಾವು-ನೋವುಗಳಿಗೆ ಸಾಕ್ಷಿಯಾಗಿದ್ದ ಈ ಸ್ಥಳದಲ್ಲಿ ಕಾರ್ಕಳ ಗ್ರಾವಾಂತರ ಪೊಲೀಸ್ ಠಾಣೆ ಹಾಗೂ ಬೆಳ್ಮಣ್ ರೋಟರಿ ಕ್ಲಬ್ ವತಿಯಿಂದ ವಾಹನ ಸವಾರರಿಗೆ ‘ನಿಧಾನವಾಗಿ ಚಲಿಸಿ’ ಎನ್ನುವ ಸೂಚನಾ ಫಲಕಗಳನ್ನು ಕೊನೆಗೂ ಅಳವಡಿಸಲಾಗಿದ್ದು, ಸಾರ್ವಜನಿಕರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ. ಅಪಾಯಕಾರಿ ತಿರುವಿನ ಅಪಘಾತಗಳ ಸರವಾಲೆಯನ್ನು ಕಂಡು ಸಾರ್ವಜನಿಕರಿಗೆ ಅಪಾಯದ ವಾಹಿತಿ ನೀಡುವ ಉದ್ದೇಶದಿಂದ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಈ ಭಾಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ನಿಧಾನವಾಗಿ ಚಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸುವ ಅಗತ್ಯವಿದೆ.

ಹಲವು ವರ್ಷಗಳಿಂದ ಈ ಭಾಗದಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು. ಸಾರ್ವಜನಿಕರ ಹಿತದೃಷ್ಟಿಯಿಂದ ರೋಟರಿ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಸೂಚನಾ ಫಲಕವನ್ನು ಅಳವಡಿಸಿದೆ. ಇದು ವಾಹನ ಸವಾರರಿಗೆ ಪ್ರಯೋಜನಕಾರಿಯಾಗಿದೆ.