ಬಿ.ಸಿ.ರೋಡಿನ ಶಿಶು ಮಂದಿರದಲ್ಲಿ ಭಾರತೀಯ ಮಜ್ದೂರ್ ಸಂದ ಸಂಸ್ಥಾಪನಾ ದಿನಾಚರಣೆ ನಡೆಯಿತು. ತಾರಾನಾಥ್ ಕೊಟ್ಟಾರಿ, ಸತೀಶ್ ಶೆಟ್ಟಿ, ಅನಿಲ್ ಕುಮಾರ್ ಇತರರು ಇದ್ದರು.
ಬಂಟ್ವಾಳ: ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತರು ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ್ ಕೊಟ್ಟಾರಿ ಸಲಹೆ ನೀಡಿದರು.
ಬಿ.ಸಿ.ರೋಡ್‌ನ ಶಿಶು ಮಂದಿರದಲ್ಲಿ ಬಂಟ್ವಾಳ ತಾಲೂಕಿನ ಆಶಾ ಕಾರ್ಯಕರ್ತೆಯರ ಮಜ್ದೂರ್ ಸಂಘ, ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಹಾಗೂ ಬೀಡಿ ಮಜ್ದೂರ್ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ, 1955ರಲ್ಲಿ ದತ್ತೋಪಂತ್ ಬಾಪುರಾವ್ ಥೇಂಗಡಿ ಅವರು ಭಾರತೀಯ ಮಜ್ದೂರ್ ಸಂಘವನ್ನು ಸ್ಥಾಪಿಸಿದ ಹಿನ್ನೆಲೆ, ಸಂಘಟನೆಯ ಉಗಮ, ಕಾರ್ಮಿಕ ಚಳವಳಿಯಲ್ಲಿ ಅದರ ಪಾತ್ರ, ಸಾಧನೆಗಳು ಹಾಗೂ ಮುಂದಿನ ದಿನಗಳಲ್ಲಿ ಹೊಸ ಕ್ಷೇತ್ರಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಅಗತ್ಯವನ್ನು ವಿವರಿಸಿದರು.
ಕಾನೂನು ಸಲಹೆಗಾರ ವಕೀಲ ಜಯರಾಮ್ ರೈ, ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಬಿಎಂಎಸ್ ಉಪಾಧ್ಯಕ್ಷೆ ಗೀತಾ ಧರ್ಮರಾಜ್, ಬಿಎಂಎಸ್ ಮೋಟಾರ್ ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ, ಆಶಾ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ತುಳಸಿ ದೇವರಾಜ್, ಆಟೋ ರಿಕ್ಷಾ ಚಾಲಕ-ಮಾಲೀಕರ ಸಂಘ ತಾಲೂಕು ಅಧ್ಯಕ್ಷ ಶ್ರೀಕಾಂತ್ ಇದ್ದರು.
ಬೀಡಿ ಮಜ್ದೂರ್ ಸಂಘದ ಜಿಲ್ಲಾ ಕಾರ್ಯದರ್ಶಿ ನಳಿನಿ ಶ್ರಮಿಕ ಗೀತೆ ಹಾಡಿದರು. ವಸಂತ ಕುಮಾರ್ ಮಣಿಹಳ್ಳ ಸ್ವಾಗತಿಸಿದರು. ಡೀಲಾಕ್ಷಿ ವಂದಿಸಿದರು. ಉಮಾಶಂಕರ್ ನಿರೂಪಿಸಿದರು.