ರಾತ್ರಿ ಗಸ್ತು ಸಿಬ್ಬಂದಿ ರೋಗಿಯ ಆರೈಕೆ ಮಾಡುತ್ತಿರುವುದು. 
ಉಡುಪಿ

ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ಬೀಟ್ ಪೊಲೀಸ್

ಬಂಟ್ವಾಳ: ರಾತ್ರಿ ವೇಳೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಜೀವ ಉಳಿಸಿದ ಘಟನೆ ಬಿ.ಸಿ.ರೋಡಿನ ಗೂಡಿನಬಳಿಯಲ್ಲಿ ನಡೆದಿದೆ.
ಗೂಡಿನಬಳಿ ನಿವಾಸಿ ಅಶ್ರಫ್ ಅವರಿಗೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಈ ಸಂದರ್ಭ ಗಸ್ತು ತಿರುಗುತ್ತಿದ್ದ ಬಂಟ್ವಾಳ ನಗರ ಠಾಣೆ ಕಾನ್‌ಸ್ಟೆಬಲ್ ವಿನೋದ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಸ್ಥಳಕ್ಕೆ ಧಾವಿಸಿದ್ದಾರೆ. ಅವರಿಗೆ ಲಘು ಹೃದಯಾಘಾತ ಸಂಭವಿಸಿರುವುದು ಗಮನಕ್ಕೆ ಬಂದಿದ್ದು, ಸಿಪಿಆರ್ ನೀಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸಿಬ್ಬಂದಿಯ ಸಮಯಪ್ರಜ್ಞೆ, ತುರ್ತು ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.