ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ
ಉಡುಪಿ: ಜಿಲ್ಲೆಯಲ್ಲಿರುವ 71 ಬಿಎಸ್ಎನ್ಎಲ್ ಟವರ್ಗಳಿಗೆ ಕೇಂದ್ರ ಸರ್ಕಾರ ಹೊಸದಾಗಿ ಬ್ಯಾಟರಿ ಹಾಗೂ ಸೋಲಾರ್ ಸ್ಥಾವರ ಮಂಜೂರು ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾಜ್ ಸಿಂಧಿಯಾ ಅವರು ಈ ವಿಚಾರವಾಗಿ ನನಗೆ ಪತ್ರದ ಮೂಲಕ ತಿಳಿಸಿದ್ದು, 2026ರ ಜನವರಿ ತಿಂಗಳೊಳಗೆ ಬ್ಯಾಟರಿ ಸರಬರಾಜು ಮಾಡಲಾಗುವುದು. ತಮ್ಮ ಮನವಿಯಂತೆ 21 ಕಡೆಗಳಲ್ಲಿ ಸೋಲಾರ್ ಸ್ಥಾವರವೂ ಮಂಜೂರಾಗಿದ್ದು, ಇದನ್ನು 2026ರ ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಉಡುಪಿಯ ಬಿಎಸ್ಎನ್ಎಲ್ ಕಚೇರಿಯಲ್ಲಿ ನಡೆದಿದ್ದ ಕುಂದು&ಕೊರತೆಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿರುವ ಟವರ್ಗಳ ಸಮಸ್ಯೆಯನ್ನು ತಿಳಿದು, ಕೇಂದ್ರ ಸಚಿವರ ಗಮನಕ್ಕೆ ತರಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಹೊಸ ಬ್ಯಾಟರಿ ಮತ್ತು ಸೋಲಾರ್ ಸ್ಥಾವರಗಳ ಅಳವಡಿಕೆಯಿಂದ ಜಿಲ್ಲೆಯಲ್ಲಿ ಬಿಎಸ್ಎನ್ಎಲ್ನ ಗುಣಮಟ್ಟ ಹೆಚ್ಚಲಿದೆ ಎಂದು ಸಂಸದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.