ಮೈಲಾಟಿ ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆ ಶಿಲಾಫಲಕವನ್ನು ಶಾಸಕ ಸಿ.ಎಚ್.ಕುಞಂಬು ಅನಾವರಣಗೊಳಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ವಕೀಲ ವಿ.ಮುರುಕದಾಸ್ ಮೊದಲಾದವರಿದ್ದರು.  
ಉಡುಪಿ

ಬ್ಯಾಟರಿ ಇಂಧನ ಸಂಗ್ರಹ ಕಾಮಗಾರಿಗೆ ಚಾಲನೆ

ಕಾಸರಗೋಡು: ಮೈಲಾಟಿ 220 ಕೆವಿ ಸಬ್‌ಸ್ಟೇಷನ್‌ನಲ್ಲಿ ಸ್ಥಾಪಿಸಲಾಗುವ 125 ಮೆಗಾವಾಟ್ ಮತ್ತು 500 ಮೆಗಾವಾಟ್ ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆ (ಬಿಇಎಸ್‌ಎಸ್) ಕಾಮಗಾರಿಯನ್ನು ವಿದ್ಯುತ್ ಸಚಿವ ಕೆ.ಕೃಷ್ಣನ್ ಕುಟ್ಟಿ ಆನ್‌ಲೈನ್ ಮೂಲಕ ಉದ್ಘಾಟಿಸಿದರು.
ಕಾಸರಗೋಡಿನಲ್ಲಿ ನಡೆಯುತ್ತಿರುವ ಇಂಧನ ಕ್ರಾಂತಿ ಮತ್ತು ಕೇರಳದ ಇಂಧನ ವಲಯದ ದೊಡ್ಡ ಬದಲಾವಣೆ ರಾಜ್ಯದ ವಿದ್ಯುತ್ ವಲಯಕ್ಕೆ ಪುನಶ್ಚೇತನ ಒದಗಿಸಿದೆ. ಇದು ಕಾಸರಗೋಡು ಜಿಲ್ಲೆಯ ವಿದ್ಯುತ್ ಸಮಸ್ಯೆ ಬಗೆಹರಿಸಲು ನೆರವಾಗುವುದರ ಜತೆಗೆ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಕಾರವಾಗಲಿದೆ. ಮೈಲಾಟಿ ಯೋಜನೆ ರಾಜ್ಯದ ಮೊದಲ 125 ಮೆಗಾವಾಟ್ ಬ್ಯಾಟರಿ ಶಕ್ತಿ ಸಂಗ್ರಹ ಯೋಜನೆಯಾಗಿದ ಎಂದರು.
ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಕೆಎಸ್‌ಇಬಿಎಲ್ ಸ್ವತಂತ್ರ ನಿರ್ದೇಶಕ, ವಕೀಲ ವಿ.ಮುರುಕದಾಸ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಕೆ.ಸುಜಾತಾ, ಉದುಮ ಗ್ರಾಪಂ ಅಧ್ಯಕ್ಷ ಪಿ.ವಿ.ರಾಜೇಂದ್ರನ್, ಮುಖ್ಯ ಇಂಜಿನಿಯರ್‌ಗಳಾದ ಕೆ.ಶಾಂತಿ ಮತ್ತು ಹರೀಶನ್ ಮೊಟ್ಟಮ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.
ಕೆಎಸ್‌ಇಬಿಎಲ್ ವಿತರಣೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ನಿರ್ದೇಶಕ ಪಿ.ಸುರೇಂದ್ರ ಸ್ವಾಗತಿಸಿದರು. ಜಿ. ಸಜೀವ್ ಯೋಜನಾ ವರದಿ ಮಂಡಿಸಿದರು.