ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಬ್ರಾಯ ಪೂಜಾರಿ ಪಜೀರ್ ಭಂಡಾರಮನೆ, ನಾಗಮ್ಮ ಪೂಜಾರಿ ಇನೋಳಿ, ರಮೇಶ್ ಕರ್ಕೇರ ಬೋಳಿಯಾರು, ಲಕ್ಷ್ಮಣ ಪೂಜಾರಿ ಬೋಲ್ಲೆಕುಮೇರು, ಮೀನಾಕ್ಷಿ ಗೋಳಿದಪಡ್ಪು ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ, ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಡಾ.ಜಯರಾಜ್ ಎನ್. ಇದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಮಾಜದಲ್ಲಿ ಅಸ್ಪಶ್ಯತೆ, ಜಾತೀಯತೆ, ಅಸಮಾನತೆ ತುಂಬಿದ್ದ ಸಂದರ್ಭದಲ್ಲಿ ಸಮಾನತೆ ಆಶಯದೊಂದಿಗೆ ಹೋರಾಡಿದ ಬಸವಣ್ಣ ಮತ್ತು ನಾರಾಯಣಗುರುಗಳು ಆಧ್ಯಾತ್ಮ, ಸಾಮಾಜಿಕ ಸಾಧನೆ ಮೂಲಕ ಇಡೀ ಸಮಾಜವನ್ನು ಪರಿವರ್ತನೆ ಮಾಡಿದ ಯುಗಪ್ರವರ್ತಕರು ಎಂದು ಚಿಂತಕಿ, ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಯೋಗದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಬ್ರಾಯ ಪೂಜಾರಿ ಪಜೀರ್ ಭಂಡಾರಮನೆ, ನಾಗಮ್ಮ ಪೂಜಾರಿ ಇನೋಳಿ, ರಮೇಶ್ ಕರ್ಕೇರ ಬೋಳಿಯಾರು, ಲಕ್ಷ್ಮಣ ಪೂಜಾರಿ ಬೋಲ್ಲೆಕುಮೇರು, ಮೀನಾಕ್ಷಿ ಗೋಳಿದಪಡ್ಪು ಅವರನ್ನು ಸನ್ಮಾನಿಸಲಾಯಿತು. ಆಶ್ರಯರಹಿತರಿಗೆ ಮನೆ ನಿರ್ಮಾಣಕ್ಕಾಗಿ ಧನಸಹಾಯ ನೀಡಲಾಯಿತು.
ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಡಾ.ಜಯರಾಜ್ ಎನ್. ಅಧ್ಯಕ್ಷತೆ ವಹಿಸಿದ್ದರು. ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ವಿಜೇತ್ ಪಜೀರ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ರವೀಂದ್ರ ಬಂಗೇರ ಕೊಣಾಜೆ ಸ್ವಾಗತಿಸಿದರು. ನಾರಾಯಣಗುರು ಅಧ್ಯಯನ ಪೀಠದ ಡಾ.ರವಿರಾಜ್ ಅತಿಥಿಗಳನ್ನು ಪರಿಚಯಿಸಿದರು. ವೇಣುಗೋಪಾಲ್ ವಂದಿಸಿದರು. ಸುಜಾತಾ ಹರೇಕಳ ನಿರೂಪಿಸಿದರು.