ಬಂಧನಕ್ಕೊಳಕ್ಕಾದ ಪ್ರವೀಣ್ ಮೆಂಡೊನ್ನಾ, ವಲೇರಿಯನ್ ಮೆಂಡೊನ್ನಾ ಹಾಗೂ ಹತ್ಯೆಯಾದ ವನಜಾ ಪೂಜಾರ್ತಿ.
* ಉಡುಪಿ ತಾಲೂಕು ಮಣಿಪುರ ಗ್ರಾಮದದಲ್ಲಿ ಘಟನೆ
ಉಡುಪಿ: ಯಾವುದೋ ವಿಚಾರಕ್ಕೆ ಗಲಾಟೆ ನಡೆದು ಮಹಿಳೆಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಅರಬಿ ಕೆನರಾಡಿಯಲ್ಲಿ ಸಂಭವಿಸಿದೆ.
ವನಜಾ ಪೂಜಾರ್ತಿ (60) ಹತ್ಯೆಯಾದ ಮಹಿಳೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಲೇರಿಯನ್ ಮೆಂಡೊನ್ನಾ ಮತ್ತು ಪ್ರವೀಣ್ ಮೆಂಡೊನ್ನಾ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನಕ್ಕೊಳಗಾಗಿರುವ ಇಬ್ಬರೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾಗಿದ್ದು, ವನಜಾ ಪೂಜಾರ್ತಿ ಎಂಬಾಕೆಯೊಂದಿಗೆ ಆಗಾಗ ವಲೇರಿಯನ್ ಮೆಂಡೊನ್ನಾ ಎಂಬಾತನ ಮನೆಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಾ.9ರಂದು ಸಂಜೆ 5 ಗಂಟೆಯಿಂದ ಮಾ.10ರ ಬೆಳಗ್ಗೆ 7 ಗಂಟೆಯ ಮಧ್ಯಮ ಅವಧಿಯಲ್ಲಿ ಸಹೋದರರಿಬ್ಬರು ಕ್ಷುಲ್ಲಕ ಕಾರಣಕ್ಕಾಗಿ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೆಟಿ ನೀಡಿ ಪರಿಶೀಲಿಸಿದರು. ಕೆಎಂಸಿ ಮಣಿಪಾಲದ ಪೊರೆನ್ಸಿಕ್ ವೈದ್ಯರು, ಸೋಕೋ ತಂಡ, ಶ್ವಾನ ದಳ ಮತ್ತು ಫಿಂಗರ್ ಪ್ರಿಂಟ್ ವಿಭಾಗದ ತಜ್ಞರು ಪರಿಶೀಲನೆ ನಡೆಸಿದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.