ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ 46ನೇ ವಾರ್ಷಿಕ ಸಭೆಯಲ್ಲಿ ಜ್ಞಾನಶ್ರೀ ಅರಳ, ಮನ್ವಿತಾ, ಕೃತಿ ಎನ್.ಬಿ.ಪಿ., ಸಾನ್ವಿ ಕೆ. ಅವರನ್ನು ಸನ್ಮಾನಿಸಲಾಯಿತು. ಡಾ.ಎಂ.ಪಿ.ವರ್ಷ, ಮಯೂರ್ ಉಳ್ಳಾಲ್, ಪುಂಡರೀಕಾಕ್ಷ ಯು., ಡಿ.ಚಂದಪ್ಪ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಬಂಟ್ವಾಳ ತಾಲೂಕು ಕುಲಾಲ ಸಂಘ ವಾರ್ಷಿಕ ಸಭೆ

ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ 46ನೇ ವಾರ್ಷಿಕ ಸಭೆ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷ ಬಿ.ರಮೇಶ್ ಸಾಲಿಯಾನ್ ಸಂಚಯಗಿರಿ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದ ಜ್ಞಾನಶ್ರೀ ಅರಳ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದ ಮನ್ವಿತಾ, ಬಾಲಕಿಯರ ಡಿಸ್ಕಸ್ ತ್ರೋ ಆಟದಲ್ಲಿ ರಾಷ್ಟ್ರಮಟ್ಟದಲ್ಲಿ 10ನೇ ಸ್ಥಾನ ಪಡೆದ ಕೃತಿ ಎನ್.ಬಿ.ಪಿ., ಕರಾಟೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸಾನ್ವಿ ಕೆ., ಡಾಕ್ಟರೇಟ್ ಪದವೀಧರೆ ಬಬಿತಾ ಗಣೇಶ್, ಚಿತ್ರ ಕಲಾವಿದೆ ಸುಕನ್ಯಾ ಸೌತೆಬಳ್ಳಿ, ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಪಡೆದ ಸುಶ್ಮಿತಾ ಸೋಮನಾಥ್ ಅವರನ್ನು ಸನ್ಮಾನಿಸಲಾಯಿತು. ಸಹಕಾರಿ ಇಲಾಖೆಯಲ್ಲಿ ಸ್ವಯಂ ನಿವೃತ್ತಿ ಪಡೆದ ಪ್ರಥಮ ದರ್ಜೆ ಸಹಾಯಕಿ ಜಲಜಾಕ್ಷಿ ಕುಲಾಲ್ ಅವರಿಗೆ ಅಮೂಲ್ಯ ರತ್ನ ಪ್ರಶಸ್ತಿ ನೀಡಲಾಯಿತು. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಗಾನ ಸಂಭ್ರಮ ನಡೆಯಿತು.
ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ಪಿ.ವರ್ಷ ಮೈಸೂರು, ಜಿಲ್ಲಾ ಮಾತೃ ಸಂಘ ಅಧ್ಯಕ್ಷ ಮಯೂರ್ ಉಳ್ಳಾಲ್, ಮುಡಿಪು ಕುಲಾಲ ಸಂಘ ಅಧ್ಯಕ್ಷ ಪುಂಡರೀಕಾಕ್ಷ ಯು., ನಿವೃತ್ತ ಡೆಪ್ಯುಟಿ ಬಿಎಸ್‌ಎಫ್ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ, ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ಕುಲಾಲ ಯುವವೇದಿಕೆ ಅಧ್ಯಕ್ಷ ಸುಮಿತ್ ಸೊರ್ನಾಡು, ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಅಧ್ಯಕ್ಷೆ ವಸಂತಿ ಭೋಜ ಸಾಲಿಯಾನ್, ಮಹಿಳಾ ಘಟಕ ಅಧ್ಯಕ್ಷೆ ಆಶಾ ಗಿರಿಧರ್, ಸೇವಾ ದಳಪತಿ ಜಯಂತ ಕುಲಾಲ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಯಾದವ ಸ್ವಾಗತಿಸಿದರು.