ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಬಂಗಾರಿ. 
ಉಡುಪಿ

ಬಜಕೂಡ್ಲು ಗೋಶಾಲೆಯ ‘ಬಂಗಾರಿ’ ಇನ್ನಿಲ್ಲ

ಕಾಸರಗೋಡು: ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ‘ಬಂಗಾರಿ’ ಗೋವು ದೀರ್ಘಕಾಲದ ಅಸೌಖ್ಯದಿಂದ ಬುಧವಾರ ಇಹಲೋಕ ತ್ಯಜಿಸಿದೆ.
ಕಾಸರಗೋಡು ಗಿಡ್ಡ ತಳಿಯಲ್ಲಿ ಅತ್ಯಂತ ಗಿಡ್ಡ ದನವೆಂಬ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ‘ಬಂಗಾರಿ’ ಹೆಸರು ದಾಖಲಾಗಿತ್ತು. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ 2024 ಆರಂಭಗೊಂಡ ಅಮೃತಧಾರಾ ಗೋಶಾಲೆಗೆ 2004ರಲ್ಲಿ ಬಂಗಾರಿಯ ಆಗಮನವಾಗಿದ್ದು, ಗೋಶಾಲೆ ಮುದ್ದಿನ ಹಸುವಾಗಿ ಗುರುತಿಸಲ್ಪಟ್ಟಿತ್ತು.

ಪ್ರಸಕ್ತ ಬಜಕೂಡ್ಲು ಪಳ್ಳಕಾನದ ಹೊಸ ನಿವೇಶನದಲ್ಲಿ ಅಮೃತಧಾರಾ ಗೋಶಾಲೆ ಕಾರ್ಯಾಚರಿಸುತ್ತಿದೆ. 26 ವರ್ಷ ಪ್ರಾಯದ ಬಂಗಾರಿ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದು, ಗೋಶಾಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೆಚ್ಚು ಪ್ರೀತಿ ತೋರುತ್ತಿದ್ದ ಹಸು ಇದಾಗಿದ್ದು, ಗೋಶಾಲೆಯಲ್ಲಿ ಹೆಚ್ಚಿನ ಕಾಳಜಿಯಿಂದ ಆರೈಕೆ ಮಾಡಲಾಗುತ್ತಿತ್ತು.