ಲಯನ್ಸ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಉದ್ಘಾಟಿಸಿದರು.
ಉಡುಪಿ: ಮುಂಬೈ ಡಾ. ಎ. ವಿ. ಬಾಳಿಗಾ ಚಾರಿಟೀಸ್ ಮತ್ತು ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಕರ್ನಾಟಕ ಸರ್ಕಾರದ 'ಮಾನಸಧಾರ' ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಂಧು ಹಗಲು ಆರೈಕೆ ಕೇಂದ್ರವನ್ನು ಲಯನ್ಸ್ ಕ್ಲಬ್ ವತಿಯಿಂದ ಉನ್ನತಿಕರಣಗೊಳಿಸಲಾಗಿದ್ದು, ಗುರುವಾರ ಲಯನ್ಸ್ ಇಂಟರ್ನ್ಯಾಶನಲ್ ಡಿಸ್ಟ್ರಿಕ್ಟ್ 317 ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಮಾತನಾಡಿ, ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಮನೋರೋಗಿಗಳಿಗೆ ಇಂತಹ ಹಗಲು ಆರೈಕೆ ಕೇಂದ್ರಗಳು ಆಸರೆಯಾಗಿದ್ದು, ಕಳೆದ 10 ವರ್ಷಗಳಿಂದ ಈ ಸೇವಾ ಕೇಂದ್ರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಸಂಸ್ಥೆಯ ಹನೀಫ್ ಮಹಮ್ಮದ್, ವರುಣ್ ಶೆಟ್ಟಿ, ರಾಜೀವ್ ಕೋಟ್ಯಾನ್, ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾ. ನಿಶಾಂತ್ ಭಟ್, ಕಾರ್ಯಕ್ರಮ ಸಂಯೋಜಕ ಡಾ. ಎಚ್. ಗಣೇಶ್ ಪೈ, ಸೌಜನ್ಯ ಶೆಟ್ಟಿ, ಮನೋವೈದ್ಯ ಡಾ. ಮಾನಸ್, ಆಸ್ಪತ್ರೆಯ ಮನೋವೈದ್ಯ ಡಾ. ದೀಪಕ್ ಮಲ್ಯ, ವೈದ್ಯಾಧಿಕಾರಿ ಡಾ. ಸುನೀಲ್ ಕುಮಾರ್, ಮನ@ಶಾಸ್ತ್ರಜ್ಞ ನಾಗರಾಜ ಮೂರ್ತಿ, ಹಿರಿಯ ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ಉಪಸ್ಥಿತರಿದ್ದರು. ಕೇಂದ್ರದ ಮೇಲ್ವಿಚಾರಕಿ ಜಮಿಲಾ ವಂದಿಸಿದರು. ವಿಶ್ವೇಶ್ವರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.