ಮಡಿಕೈ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಮೆಕ್ಕಟ್ ಶಾಲೆಯಲ್ಲಿ ಬಾಳೆಹಣ್ಣಿನ ಉತ್ಸವ ನಡೆಯಿತು. ಸಾಬು ಅಬ್ರಹಾಂ, ವಿ.ಪ್ರಕಾಶನ್, ಎಂ.ವಿ.ಜಯನ್, ಕೆ.ಸುಜಾತಾ ಮೊದಲಾದವರು ಉಪಸ್ಥಿತರಿದ್ದರು.  
ಉಡುಪಿ

ಮೆಕ್ಕಟ್ ಶಾಲೆಯಲ್ಲಿ ಬಾಳೆಹಣ್ಣಿನ ಉತ್ಸವ

ಮುಳ್ಳೇರಿಯ: ಮಡಿಕೈ ಗ್ರಾಪಂ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಮೆಕ್ಕಟ್ ಶಾಲೆಯಲ್ಲಿ ಬಾಳೆಹಣ್ಣಿನ ಉತ್ಸವ ನಡೆಯಿತು. ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ ಉತ್ಸವ ಉದ್ಘಾಟಿಸಿದರು. ಮಡಿಕೈ ಗ್ರಾಪಂ ಅಧ್ಯಕ್ಷ ವಿ.ಪ್ರಕಾಶನ್ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಅಂಕಗಳಿಸಿದ ಮಡಿಕೈ ಗ್ರಾಪಂ ಕಕ್ಕತ್, ಕಂಜಿರಪೊಯಿಲ್ ಪ್ರಥಮ ಮತ್ತು ಮಡಿಕೈ ದ್ವಿತೀಯ ಸ್ಥಾನ ಪಡೆದ ಶಾಲೆಗಳನ್ನು ಸನ್ಮಾನಿಸಲಾಯಿತು.
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಎಂ.ವಿ.ಜಯನ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಕೆ.ಸುಜಾತಾ, ಪಂಚಾಯಿತಿ ಉಪಾಧ್ಯಕ್ಷೆ ಪಿ. ಜ್ಯೋತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ.ವಿ.ಪದ್ಮಿನಿ, ಪಿ.ಕುಂಞಿ ಕೃಷ್ಣನ್, ಎ.ರಾಜನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಾಯಕ ಸಂಯೋಜಕ ಡಿ.ಹರಿದಾಸ್, ಪಂಚಾಯಿತಿ ಕಾರ್ಯದರ್ಶಿ ಕೆ.ಬಿಜು ಉಪಸ್ಥಿತರಿದ್ದರು.
ಸಿಡಿಎಸ್ ಅಧ್ಯಕ್ಷೆ ಕೆ.ಬಿ.ಸೀನಾ ಸ್ವಾಗತಿಸಿ, ಕುಟುಂಬಶ್ರೀ ಸದಸ್ಯ ಕಾರ್ಯದರ್ಶಿ ಬಾಬು ಅಪ್ಯಾಲ್ ವಂದಿಸಿದರು. ಪಂಚಾಯಿತಿ ವಿವಿಧ ವಾರ್ಡ್‌ಗಳಲ್ಲಿರುವ 263 ಕುಟುಂಬಶ್ರೀ ಘಟಕಗಳಿಂದ 850 ಸದಸ್ಯರು ಭಾಗವಹಿಸಿ ಅನೇಕ ವೈವಿಧ್ಯಮಯ ಮತ್ತು ನವೀನ ಉತ್ಪನ್ನ ಪ್ರದರ್ಶಿಸಿದರು. ಸುಮಾರು 135 ವಿಧದ ಬಾಳೆಹಣ್ಣಿನ ಉತ್ಪನ್ನ ಪ್ರದರ್ಶಿಸಲಾಯಿತು.