ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಗ್ರಾಹಕರ ಸಮಾವೇಶ 
ಉಡುಪಿ

ಕರಾವಳಿ ಅಭಿವೃದ್ಧಿಗೆ ಸಹಾಕರಿ ಕ್ಷೇತ್ರದ ಕೊಡುಗೆ ಅಪಾರ: ಯಶ್ಪಾಲ್​ ಸುವರ್ಣ

ಉಡುಪಿ: ಸ್ವಾತಂತ್ರ ಪೂರ್ವದಲ್ಲೇ ನಮ್ಮ ಹಿರಿಯರು ಸಹಕಾರಿ ಕ್ಷೇತ್ರದ ಮಹತ್ವ ಅರಿತು ಸಂಗಳನ್ನು ಸ್ಥಾಪಿಸಿದ್ದು, ಕರಾವಳಿಗೆ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.
ಭಾನುವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಗ್ರಾಹಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸಮಾನಾಂತರ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, 30 ಕೋಟಿಗೂ ಅಧಿಕ ಮಂದಿ ಸಹಕಾರಿ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, 1980ರಲ್ಲಿ ಕೇವಲ 306 ಸದಸ್ಯರಿಂದ ರೂ.6,200 ಪಾಲು ಬಂಡವಾಳ ಮತ್ತು ರೂ.4,664 ಠೇವಣಿ ಹೊಂದಿದ್ದ ಸೊಸೈಟಿ, ಜನವರಿ 2026ರ ಅಂತ್ಯಕ್ಕೆ 22,700 ಸದಸ್ಯರಿಂದ ರೂ.4.89 ಕೋಟಿ ಪಾಲು ಬಂಡವಾಳ ಹಾಗೂ ರೂ. 628 ಕೋಟಿ ಠೇವಣಿ ಸಂಗ್ರಹಿಸಿರುವುದು ಪ್ರಗತಿಯ ದ್ಯೋತಕವಾಗಿದೆ. ಸಂಘವು 2024-&25ನೇ ಸಾಲಿನಲ್ಲಿ ಸುಮಾರು ರೂ.2,900 ಕೋಟಿ ವ್ಯವಹಾರ ನಡೆಸಿದ್ದು, ರೂ. 525 ಕೋಟಿ ಸದಸ್ಯರ ಹೊರಬಾಕಿ ಸಾಲ ಹೊಂದಿದೆ. 15.47 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಪ್ರಕಾಶ್​ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಸಹಕಾರ ಸಂಗಳ ಉಪನಿಬಂಧಕಿ ಲಾವಣ್ಯ ಕೆ. ಆರ್​., ನಿರ್ದೇಶಕರಾದ ಸಂಜೀವ ಕಾಂಚನ್​, ವಿನಯಕುಮಾರ್​, ಸಾಧುಸಾಲ್ಯಾನ್​, ಉಮಾನಾಥ ಎಲ್​., ಪುರುಷೋತ್ತಮ ಶೆಟ್ಟಿ, ಜಯಾ ಶೆಟ್ಟಿ, ಗಾಯತ್ರಿ ಭಟ್​, ಸಯ್ಯದ್​ ಅಬ್ದುಲ್​ ರಜಾಕ್​, ಮನೋಹರ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ರಾಜೇಶ್​ ಶೇರಿಗಾರ್​ ಉಪಸ್ಥಿತರಿದ್ದರು.