ಉಡುಪಿಯ ಎಸ್​ಡಿಎಂ ಕಾಲೇಜ್​ನಲ್ಲಿ ಉದ್ಯಾವರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಯೋರ್ವೇದದ ಮಹತ್ವ ತಿಳಿಸುವ ಕಾರ್ಯಕ್ರಮ ನಡೆಯಿತು. ಡಾ.ಮಮತಾ ಕೆ.ವಿ., ಡಾ. ಶ್ರೀಕಾಂತ ಪಿ., ಡಾ. ಪೃಥ್ವಿರಾಜ ಪುರಾಣಿಕ, ಡಾ. ನಾಗರಾಜ ಎಸ್​., ತಾರಾ, ಡಾ. ನಾಗರತ್ನಾ ಜೆ., ಡಾ.ಕಾವ್ಯಾ, ಡಾ. ಚಿತ್ರಲೇಖಾ ಇತರರಿದ್ದರು. 
ಉಡುಪಿ

ಜೀವನಶೈಲಿ ಬಿಂಬಿಸುವ ವಿಜ್ಞಾನ ಆಯುರ್ವೇದ

* ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ ಪಿ. ಮಾಹಿತಿ

* ಎಸ್​ಡಿಎಂ ಕಾಲೇಜ್​ನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ

ಉಡುಪಿ: ವಿದ್ಯಾರ್ಜನೆಯ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳು ಆಯುರ್ವೇದದ ಮಹತ್ವಗಳ ಕುರಿತು ಅರಿತುಕೊಳ್ಳಬೇಕು. ಆಯುರ್ವೇದವು ಜೀವನಶೈಲಿಯನ್ನು ಬಿಂಬಿಸುವ ವಿಜ್ಞಾನ. ಅದರ ಮೂಲವೇ ಸಸ್ಯಗಳ ಜ್ಞಾನ. ಅವುಗಳ ವಿಸ್ತೃತ ಮಾಹಿತಿ ತಿಳಿಯಿರಿ ಎಂದು ಎಸ್​ಡಿಎಂ ಕಾಲೇಜ್​ನ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಹಾಗೂ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ. ಶ್ರೀಕಾಂತ ಪಿ. ಸಲಹೆ ನೀಡಿದರು.

ಉಡುಪಿ ಉದ್ಯಾವರದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್​, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೌಮಾರಭೃತ್ಯ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆ ನಿಮಿತ್ತ ಉದ್ಯಾವರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ (ನ.12) ಆಯೋಜಿಸಿದ್ದ ಆಯುರ್ವೇದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜ್​ನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಮಾತನಾಡಿ, ಆಯುರ್ವೇದ ಕಲಿಕೆಯ ಮಹತ್ವ, ಚರ್ಯಗಳ ಮೂಲ ಉದ್ದೇಶ, ಜೀವನ ಶೈಲಿಯಿಂದ ಆರೋಗ್ಯ-ಯುಷ್ಯದಲ್ಲಿ ಆಗುವ ಬದಲಾವಣೆ, ಪ್ರಕೃತಿಯಲ್ಲಿ ಪಾಲಿಸಬೇಕಾದ ದಿನಚರಿಗಳ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಶೈಕ್ಷಣಿಕ ಉಪಪ್ರಾಂಶುಪಾಲ ಡಾ. ನಾಗರಾಜ ಎಸ್​. ಹಾಗೂ ಉದ್ಯಾವರ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ತಾರಾ ಮಾತನಾಡಿದರು. ಸಹ ಪ್ರಾಧ್ಯಾಪಕಿ ಡಾ. ನಾಗರತ್ನಾ ಜೆ. ಸಹಾಯಕ ಪ್ರಾಧ್ಯಾಪಕಿಯರಾದ ಡಾ.ಕಾವ್ಯಾ, ಡಾ. ಚಿತ್ರಲೇಖಾ ಉಪಸ್ಥಿತರಿದ್ದರು.

ಕಿರುವೈದ್ಯರಾದ ಡಾ. ಗಂಗಾ, ಡಾ. ನಾಗಶ್ರೀ ಪ್ರಾರ್ಥಿಸಿದರು. ಕೌಮಾರಭೃತ್ಯ ವಿಭಾಗದ ವಿಭಾಗ ಮುಖ್ಯಸ್ಥ ಡಾ. ಪೃಥ್ವಿರಾಜ ಪುರಾಣಿಕ ಸ್ವಾಗತಿಸಿದರು. ಬಾಲರೋಗ ವಿಭಾಗದ ದ್ವೀತಿಯ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪೂಜಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸಹನಾ ಶಂಕರಿ ವಂದಿಸಿದರು.

ಶರೀರ ರಚನೆ, ದೈಹಿಕ ಬದಲಾವಣೆಯ ಮಾಹಿತಿ

ಸಭಾ ಕಾರ್ಯಕ್ರಮದ ಬಳಿಕ 'ಹದಿಹರೆಯದ ದೈಹಿಕ ಹಾಗೂ ಮಾನಸಿಕ ಬದಲಾವಣೆ' ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿಭಾಗದ ಮಕ್ಕಳತಜ್ಞರು ಎಲ್ಲ 56 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಸಂಸ್ಥೆಯ ಅಮೂಲ್ಯ ಗಿಡಮೂಲಿಕೆಗಳ ಕುರಿತು ದ್ರವ್ಯಗುಣ ವಿಭಾಗದ ಅಧ್ಯಾಪಕರಾದ ಡಾ. ಫೈಜಲ್​ ಹಾಗೂ ಡಾ. ಪೂರ್ಣಿಮಾ ತಿಳಿಸಿದರು. ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣಮೂರ್ತಿ ಎನ್​., ಸಹ ಪ್ರಾಧ್ಯಾಪಕಿ ಡಾ.ಅಂಜು ಥೋಮಸ್​ "ಅತ್ಯಾಧುನಿಕ ತಂತ್ರಜ್ಞಾನದ ಅನಾಟಮೇಜ್​' ಮೂಲಕ ದೇಹದ ಭಾಗಗಳನ್ನು ವಿವರಿಸಿ, ಅನಾಟಮಿ ಸಂಗ್ರಹಾಲಯದಲ್ಲಿರುವ ಶರೀರದ ಅಂಗಾಂಗಗಳ ರಚನೆಯನ್ನು ಪ್ರತ್ಯಕ್ಷವಾಗಿ ತೋರಿಸಿದರು.