ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷೆ ವಿಮಲಾ ರಂಗಯ್ಯ ಉದ್ಘಾಟಿಸಿದರು. ಪ್ರಮುಖರಾದ ಸೋಮಶೇಖರ ನಾಯಕ್, ಸತೀಶ್ ಟಿ.ಎನ್., ಬಾಲಕೃಷ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ದುಶ್ಚಟಮುಕ್ತ ಬದುಕಿನಿಂದ ಯುವ ಜನಾಂಗ ಅಭ್ಯುದಯವಾಗಲು ಸಾಧ್ಯವಿದೆ. ವಿದ್ಯಾರ್ಜನೆ ಅವಧಿಯಲ್ಲಿಯೇ ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಬೇಕು. ಇದು ಓದು ಬರಹ ಸೇರಿದಂತೆ ನಮ್ಮ ಭವಿಷ್ಯಕ್ಕೆ ಕೊಡಿಯೇಟು ನೀಡುತ್ತದೆ ಎಂಬ ಪರಿಜ್ಞಾನ ಎಳವೆಯಲ್ಲಿಯೇ ಮೂಡುವಂತೆ ಮಾಡುವುದು ಅತ್ಯವಶ್ಯಕ ಎಂದು ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷೆ ವಿಮಲಾ ರಂಗಯ್ಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಜನಜಾಗೃತಿ ವೇದಿಕೆ ಸುಬ್ರಹ್ಮಣ್ಯ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ, ಶ್ರೀ ಸುಬ್ರಹ್ಮಣ್ಯೇಶ್ವರ ಪಪೂ ಕಾಲೇಜು, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸುಬ್ರಹ್ಮಣ್ಯ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಟಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಪ್ರಾಂಶುಪಾಲ ಸೋಮಶೇಖರ ನಾಯಕ್, ಕುಲ್ಕುಂದ ಬಸವೇಶ್ವರ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ, ಸಂಪನ್ಮೂಲ ವ್ಯಕ್ತಿ ಲೋಕೇಶ್ ಪೀರನಮನೆ, ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಪವಿತ್ರಾ ದಿನೇಶ್, ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ ಕೆ., ಸೇವಾ ಪ್ರತಿನಿಧಿ ಶೈಲಜಾ ಪ್ರವೀಣ್ ಇದ್ದರು. ಉಪನ್ಯಾಸಕರಾದ ರತ್ನಾಕರ ಸುಬ್ರಹ್ಮಣ್ಯ ನಿರೂಪಿಸಿದರು. ಶ್ರೀಧರ್ ಪುತ್ರನ್, ಕಾಲೇಜಿನ ಸಿಬ್ಬಂದಿ ಮಹೇಶ್ ಕೆ.ಎಚ್. ಸಹಕರಿಸಿದರು.