ಶಿಕ್ಷಕ-ರಕ್ಷಕ ಮಹಾಸಭೆ ಹಾಗೂ ವಿದ್ಯಾರ್ಥಿಗಳ ಜನಪದ ಆಹಾರ ಮೇಳದಲ್ಲಿ ಸಿದ್ದಾಪುರ ಎಸ್​.ಜೆ. ಪಿ.ಯು. ಕಾಲೇಜಿನ ಪ್ರಾಂಶುಪಾಲ ಅಮರೇಶ್​ ಹೆಗ್ಡೆ ಮಾತನಾಡಿದರು. ಪ್ರಮುಖರಾದ ಡಾ.ಜಯಪ್ರಕಾಶ್​ ಶೆಟ್ಟಿ ಎಚ್​., ಡಾ.ಎನ್​.ಎಸ್​.ಶೆಟ್ಟಿ, ಹರೀಶ್​ ಹೆಗ್ಡೆ ಮೊದಲಾದವರಿದ್ದರು. 
ಉಡುಪಿ

ಸವಾಲು ಎದುರಿಸುವ ಸಾಮರ್ಥ್ಯ ಅರಿವು

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕ-ರಕ್ಷಕ ಮಹಾಸಭೆ
  • ಆಹಾರ ಮೇಳ
ಹೆಬ್ರಿ: ಸಂಸ್ಕೃತಿಯ ತಾಯಿಬೇರುಗಳ ಜತೆಗಿನ ಸಂಬಂಧವನ್ನು ಕಡಿದುಕೊಳ್ಳದಂತೆ ಸಾಂಸತಿಕ ಅಸ್ಮಿತೆಯ ಅರಿವಿನೊಂದಿಗೆ, ತಮ್ಮ ಬದುಕಿನ ಕಷ್ಟಗಳನ್ನು ಮಕ್ಕಳಿಂದ ಮುಚ್ಚಿಡದೆ ಅವರಲ್ಲಿ ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹುಟ್ಟುಹಾಕಬೇಕು ಎಂದು ಸಿದ್ದಾಪುರ ಎಸ್​.ಜೆ. ಪಿ.ಯು. ಕಾಲೇಜಿನ ಪ್ರಾಂಶುಪಾಲ ಅಮರೇಶ್​ ಹೆಗ್ಡೆ ಹೇಳಿದರು.
ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಶಿಕ್ಷಕ-ರಕ್ಷಕ ಮಹಾಸಭೆ ಹಾಗೂ ವಿದ್ಯಾರ್ಥಿಗಳ ಜನಪದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯಡಕ ಲಯನ್ಸ್​ ಕ್ಲಬ್​ ಅಧ್ಯಕ್ಷ ರುವೀರ ಶೆಟ್ಟಿಗಾರ್​ ಮಾತನಾಡಿದರು. ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ರಾಜ್ಯಶಾಸ ಉಪನ್ಯಾಸಕ ದೇವದಾಸ್​ ಡಿ.ಪ್ರಭು ಅವರನ್ನು ಗೌರವಿಸಲಾಯಿತು.
ಪ್ರಾಂಶುಪಾಲ ಡಾ.ಜಯಪ್ರಕಾಶ್​ ಶೆಟ್ಟಿ ಎಚ್​. ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ.ಎನ್​.ಎಸ್​.ಶೆಟ್ಟಿ, ಹರೀಶ್​ ಹೆಗ್ಡೆ, ಶಾಂತಾ, ವಸಂತ ಶೆಟ್ಟಿ ಚೆನ್ನಿಬೆಟ್ಟು, ಡಾ.ಸೌಮ್ಯಲತಾ, ಡಾ.ಲಿತಿನ್​ ಬಿ.ಎಂ., ಉಮೇಶ್​ ಶೆಟ್ಟಿ ಉಪಸ್ಥಿತರಿದ್ದರು.
ನಂದೀಶ್​ ಕುಮಾರ್​ ಕೆ.ಸಿ. ಸ್ವಾಗತಿಸಿದರು. ಸಂಚಾಲಕಿ ಮೀನಾ ನಾಯ್ಕ ನಿರೂಪಿಸಿದರು. ಆಶಾ ಎಚ್​.ಬಿ. ವಂದಿಸಿದರು.