ವಿದ್ಯಾರ್ಥಿ ಸಂಘದ ಸದಸ್ಯರಿಗೆ ಉಪನ್ಯಾಸಕ ದಾಮೋದರ ಎನ್. ಪ್ರಮಾಣ ವಚನ ಬೋಧಿಸಿದರು. ಪ್ರಮುಖರಾದ ಕೇಶವ ಅಮೈ, ರಾಧಾಕೃಷ್ಣ ಕೆ.ಎಸ್., ಕೀರ್ತನ್, ತಿಲಕಾಕ್ಷ, ಬಿ.ಸುಬ್ರಹ್ಮಣ್ಯ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು.
ಕಡಬ: ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ನಮ್ಮ ದೇಶದ ಆಡಳಿತ ಪ್ರಜಾಪ್ರಭುತ್ವ ನೆಲೆಯಲ್ಲಿ ಕಾರ್ಯಚರಿಸುತ್ತಿದೆ. ಇದೇ ಮಾದರಿಯಲ್ಲಿ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರತಿ ನಾಯಕನೂ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಆಗ ದೇಶದ ಆಡಳಿತ ಯಂತ್ರ ಹೇಗೆ ನಡೆಯುತ್ತದೆ ಎಂಬುದು ಅರಿವಿಗೆ ಬರುತ್ತದೆ ಎಂದು ಉದ್ಯಮಿ ಕೇಶವ ಅಮೈ ಹೇಳಿದರು.
ಶ್ರೀ ರಾಮಕುಂಜೇಶ್ವರ ಪಪೂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕ ದಾಮೋದರ ಎನ್. ಪ್ರಮಾಣ ವಚನ ಬೋಧಿಸಿದರು. ಸಂಸ್ಥೆ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕೇಶವ ಅಮೈ ಅವರನ್ನು ಗೌರವಿಸಲಾಯಿತು. ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಕೀರ್ತನ್, ಸಾಂಸ್ಕೃತಿಕ ಸಂಘದ ಸಂಯೋಜಕ ತಿಲಕಾಕ್ಷ, ವಿಜ್ಞಾನ ಸಂಘದ ಸಂಯೋಜಕ ಬಿ.ಸುಬ್ರಹ್ಮಣ್ಯ ಕಾರಂತ್, ಚುನಾವಣಾಧಿಕಾರಿ ಚೇತನ್ ಎಂ. ಇದ್ದರು.
ಪ್ರಾಂಶುಪಾಲ ಚಂದ್ರಶೇಖರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಾ ಸ್ವಾಗತಿಸಿದರು. ಸುಶಾಂತ್ ವಂದಿಸಿದರು. ಲಿಶಾ ಶೆಟ್ಟಿ ನಿರೂಪಿಸಿದರು.