ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಪ್ರಮುಖರಾದ ಜಯಕರ್ ಶೆಟ್ಟಿ, ನಾಗೇಶ್ ಮೊಗವೀರ ಹಳ್ನಾಡು, ಉದಯ ಕುವಾರ್ ಮತ್ತಿತರರಿದ್ದರು.
ಕುಂದಾಪುರ: ಮೊಗವೀರ ಯುವ ಸಂಘಟನೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಕಳೆದ 17 ವರ್ಷಗಳಿಂದ ಜಿಲ್ಲೆಯಲ್ಲಿ ರಕ್ತದಾನದ ಅರಿವು ಮೂಡಿಸುವ ಜತೆಗೆ, ರಕ್ತದ ಕೊರತೆ ನೀಗಿಸುವ ಕಾರ್ಯ ವಾಡುತ್ತಿದೆ. ಉಡುಪಿಗೆ ರಕ್ತದಾನಿಗಳ ಜಿಲ್ಲೆ ಎಂದು ಹೆಸರು ಬರಲು ಕೂಡ ಪ್ರಮುಖ ಕಾರಣರಾಗಿದ್ದಾರೆ ಎಂದು ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರವೀಶ್ ಎಸ್.ಕೊರವಡಿ ಹೇಳಿದರು.
ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಮೊಗವೀರ ಯುವ ಸಂಘಟನೆ ಕುಂದಾಪುರ ಟಕ, ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ರೋಟರಿ ಕ್ಲಬ್ ರಿವರ್ ಸೈಡ್, ವಿ13 ಗೆಳೆಯರ ಬಳಗ, ಕುಂದಾಪುರ ವಿಠಲವಾಡಿ ಫ್ರೆಂಡ್ಸ್, ಕುಂದಾಪುರ ರೆಡ್‌ಕ್ರಾಸ್ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೆಡ್‌ಕ್ರಾಸ್ ಕುಂದಾಪುರ ಟಕದ ಚೇರ್ಮನ್ ಜಯಕರ್ ಶೆಟ್ಟಿ ವಾತನಾಡಿದರು. ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕ ಅಧ್ಯಕ್ಷ ನಾಗೇಶ್ ಮೊಗವೀರ ಹಳ್ನಾಡು ಅಧ್ಯಕ್ಷತೆ ವಹಿಸಿದ್ದರು. ಮೊದಲ ಬಾರಿಗೆ ರಕ್ತದಾನ ವಾಡಿದ ಲಂಕೇಶ್ ಹಾಗೂ 34ನೇ ಬಾರಿಗೆ ರಕ್ತದಾನ ವಾಡಿದ ಅರುಣ್ ವಿಠಲವಾಡಿ ಅವರನ್ನು ಗೌರವಿಸಲಾಯಿತು.
ಮೊಗವೀರ ಮಹಾಜನ ಸೇವಾ ಸಂ ಬಗ್ವಾಡಿ ಹೋಬಳಿ ಶಾಖಾಧ್ಯಕ್ಷ ಉದಯ ಕುವಾರ್ ಹಟ್ಟಿಯಂಗಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಜಯಂತ್ ಅಮೀನ್, ರೋಟರಿ ಕ್ಲಬ್ ರಿವರ್ ಸೈಡ್ ಅಧ್ಯಕ್ಷ ಸದಾನಂದ ಬಳ್ಕೂರು, ವಿ13 ಬಳಗದ ಅಶೋಕ್ ಕುಂದರ್, ವಿಠಲವಾಡಿ ಫ್ರೆಂಡ್ಸ್ ಅಧ್ಯಕ್ಷ ಸಂದೀಪ್ ವಿಠಲವಾಡಿ, ಮೊಗವೀರ ಸಂಟನೆಯ ಚಂದ್ರಹಾಸ ಕೋಣಿ, ಪ್ರವೀಣ ಬಂಗೇರ, ಅಶೋಕ ತೆಕ್ಕಟ್ಟೆ, ಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ವಿಠಲವಾಡಿ ಸ್ವಾಗತಿಸಿದರು.
ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಪ್ರಮುಖರಾದ ಜಯಕರ್ ಶೆಟ್ಟಿ, ನಾಗೇಶ್ ಮೊಗವೀರ ಹಳ್ನಾಡು, ಉದಯ ಕುವಾರ್ ಮತ್ತಿತರರಿದ್ದರು.