ಪಡುಬಿದ್ರಿ: ಆಟೋ ಚಾಲಕ ಕಾಪು ಕಲ್ಯದ ಇಲಿಯಾಸ್(42) ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ರಿಕ್ಷಾ ನಿಲ್ದಾಣದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು ಬಳಿಕ ಮನೆಗೆ ತೆರಳಿದ್ದರು.
ಮನೆಯಿಂದ ಪತ್ನಿ ಜತೆ ಆಸ್ಪತ್ರೆಗೆ ತೆರಳಲೆಂದು ಬೇರೊಂದು ರಿಕ್ಷಾದಲ್ಲಿ ಕಾಪುವಿಗೆ ಆಗಮಿಸಿದ್ದು, ರಿಕ್ಷಾದಲ್ಲಿ ಹೋಗುತ್ತಿದ್ದಾಗಲೇ ತೀವ್ರ ಹೃದಯಘಾತಕ್ಕೊಳಗಾಗಿದ್ದಾರೆ.
ರಸ್ತೆ ಮಧ್ಯದಲ್ಲಿ ಹೃದಯಾಘಾತಕ್ಕೊಳಗಾದ ಅವರನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕರೋರ್ವರು ತನ್ನ ಕಾರಿನಲ್ಲಿ ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದು, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರು ತಂದೆ, ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.