ಕಾಸರಗೋಡು: ಓಣಂ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದ 14ರ ಹರೆಯದ ಬಾಲಕಿಗೆ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕ ಶಾಜಿ ಎಂಬಾತನನ್ನು ಚೀಮೇನಿ ಠಾಣೆ ಪೊಲೀಸರು ಬಂಧಿಸಿ ಪೋಕ್ಸೋ ಕೇಸ್ ದಾಖಲಿಸಿದ್ದಾರೆ.
ಮನೆಗೆ ಬಂದ ಬಾಲಕಿ ಅಸೌಖ್ಯ ಪೀಡಿತಳಾಗಿರುವುದನ್ನು ಗಮನಿಸಿ ಮನೆಯವರು ವಿಚಾರಿಸಿದಾಗ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ನೀಡಿದ ಮಾಹಿತಿಯನ್ವಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.