ಬ್ರಹ್ಮಾವರದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಬ್ರಹ್ಮಾವರ ಪೊಲೀಸ್ ಠಾಣಾ ಎಎಸ್‌ಐ ಮುಕ್ತಾಬಾಯಿ ಉದ್ಘಾಟಿಸಿದರು. ಪ್ರಮುಖರಾದ ಬಿ.ಎನ್.ಶಂಕರ ಪೂಜಾರಿ, ನರಸಿಂಹ ಪೂಜಾರಿ, ಶೋಭಾ ಪೂಜಾರಿ ಮತ್ತಿತರರಿದ್ದರು.
ಬ್ರಹ್ಮಾವರ: ಮಹಿಳೆಯರು ಹದಿಹರೆಯದ ಮಕ್ಕಳ ಕುರಿತು ಹೆಚ್ಚು ಗಮನಹರಿಸಬೇಕು. ಶಾಲಾ ದಿನಗಳಲ್ಲಿ ಮನೆಯಿಂದ ಹೊರಗಡೆ ಹೋದಾಗ ಯಾರ ಜತೆ ಬೆರೆಯುತ್ತಾರೆ ಎಂಬುದನ್ನು ಗುರುತಿಸಬೇಕು. ಡ್ರಗ್ಸ್ ಸೇವನೆಯಂತಹ ದುಶ್ಚಟದ ದಾಸರಾಗದಂತೆ ಎಚ್ಚರ ವಹಿಸಿ, ಮುಂದಿನ ಯುವ ಪೀಳಿಗೆಯನ್ನು ರಕ್ಷಣೆ ವಾಡಬೇಕಾಗಿದೆ ಎಂದು ಬ್ರಹ್ಮಾವರ ಪೊಲೀಸ್ ಠಾಣಾ ಎಎಸ್‌ಐ ಮುಕ್ತಾಬಾಯಿ ಹೇಳಿದರು.
ಬ್ರಹ್ಮಾವರ ಬಿಲ್ಲವ ಸವಾಜ ಸೇವಾ ಸಂದ ಬಿಲ್ಲವ ಮಹಿಳಾ ಟಕದಿಂದ ಭಾನುವಾರ ಆಯೋಜಿಸಲಾದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಲ್ಲವ ಸಂದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಗೌರವಾಧ್ಯಕ್ಷ ನರಸಿಂಹ ಪೂಜಾರಿ, ಮಹಿಳಾ ಟಕದ ಅಧ್ಯಕ್ಷೆ ಶೋಭಾ ಪೂಜಾರಿ ಉಪಸ್ಥಿತರಿದ್ದರು. ಬಳಿಕ ಆಷಾಡ ವಾಸದ 40 ಬಗೆಯ ಗ್ರಾಮೀಣ ತಿನಿಸುಗಳ ಸಹಭೋಜನ ನಡೆಯಿತು.