ಕೋಟ: ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮಪಡಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಲು ಮನೆಯಲ್ಲಿ ವಹಿಸಬೇಕಾದ ಕಾಳಜಿಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕಿ ಪ್ರೇಮಮೂರ್ತಿ ಹೇಳಿದರು.
ಹೊಸಬೇಂಗ್ರೆ ಅಂಗನವಾಡಿಯಲ್ಲಿ ಸೋಮವಾರ ನಡೆದ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಮತ್ತು ವಿವಿಧ ಸಮಾಜಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಹಾದಿಮನಿ ಅವರು ಪೋಷಣ್ ಅಭಿಯಾನದ ಮಾಹಿತಿ ನೀಡಿದರು. ಪಿಡಿಒ ರವೀಂದ್ರರಾವ್ ಮಾತನಾಡಿದರು. ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪೋಷಣ್ ಅಭಿಯಾನ ತಾಲೂಕು ಸಂಯೋಜಕ ಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೈದ್ಯಾಧಿಕಾರಿ ಶಮಾಶಕುರ್, ಡಾ.ವಾಧವ ಪೈ, ನಿವೃತ್ತ ಪಿಡಿಒ ಬೆನ್ನಿ ಡಿಸೋಜ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಮೆಂಡನ್, ಸದಸ್ಯರಾದ ಕೃಷ್ಣ ಪೂಜಾರಿ ಪಿ., ಸುರೇಶ ಕುಂದರ್, ಗ್ರಾಪಂ ಕಾರ್ಯದರ್ಶಿ ಉಮೇಶ್, ಶ್ರೀರಾಮ ಗೆಳೆಯರ ಬಳಗದ ಅಕ್ಷಿತ್ ಪೂಜಾರಿ ಮತ್ತಿತರರಿದ್ದರು.
ಲಕ್ಷ್ಮೀ ಸ್ವಾಗತಿಸಿದರು. ಸಿಂಧು ಪ್ರಾಸ್ತಾವಿಕ ಮಾತನಾಡಿದರು. ಯಮುನಾ ಎಲ್.ಕುಂದರ್ ನಿರೂಪಿಸಿದರು. ಭಾಗೀರಥಿ ವಂದಿಸಿದರು.