ಕಾಸರಗೋಡು: ಸ್ನಾನಗೃಹದಲ್ಲಿನ ನಗ್ನ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಲಕ್ಕೋಡ್ ಮೂಲದ ಕೆ.ಕೆ.ನಾರಾಯಣನ್(69) ಎಂಬಾತನ ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಒಂಬತ್ತು ತಿಂಗಳ ಹಿಂದೆ ಎರ್ನಾಕುಲಂನ ಹೋಟೆಲ್‌ವೊಂದರಲ್ಲಿ ತಾನು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಆರೋಪಿ ನಂತರ, 2 ಲಕ್ಷ ರೂ. ನೀಡುವಂತೆ ಬೆದರಿಕೆಯೊಡ್ಡಿದ್ದಾನೆ. ಹಣ ನೀಡದ್ದಕ್ಕೆ ನಗ್ನ ದೃಶ್ಯವನ್ನು ವ್ಯಕ್ತಿಯೊಬ್ಬರಿಗೆ ಕಳುಹಿಸಿದ್ದು ಇದರಿಂದ ಮಾನಸಿಕ ಆಘಾತವುಂಟಾಗಿರುವುದಾಗಿ ನೀಲೇಶ್ವರ ಪಳ್ಳಿಕೆರೆಯ 63 ವರ್ಷದ ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.