ಉಡುಪಿಯ ಸಿದ್ಧಿ ಕ್ರಿಯೇಟಿವ್​ ಸ್ಕಿಲ್ಸ್​ ಅಕಾಡೆಮಿಯಲ್ಲಿ ಆಟಿಡೊಂಜಿ ದಿನ ಆಚರಿಸಲಾಯಿತು. ರಮ್ಯಾ ಎ.ಸಿ., ಹರ್ಷಿತಾ ಡಿ.ಕೆ. ಹಾಗೂ ವಿದ್ಯಾರ್ಥಿಗಳಿದ್ದರು. 
ಉಡುಪಿ

ತುಳುನಾಡು ಸಂಸ್ಕೃತಿಯ ಪ್ರತೀಕ ಆಟಿಡೊಂಜಿ

ಪ್ರವರ್ತಕಿ 

ರಮ್ಯಾ ಎ.ಸಿ. ಅನಿಸಿಕೆ

* ಸಿದ್ಧಿ ಕ್ರಿಯೇಟಿವ್​ ಸ್ಕಿಲ್ಸ್​ ಅಕಾಡೆಮಿಯಲ್ಲಿ ದಿನಾಚರಣೆ

ಉಡುಪಿ: ಫಿಜಾ, ರ್ಬಗರ್​ನಂತಹ ಫಾಸ್ಟ್ ಫುಡ್​ಗಳ ಭರಾಟೆಯಲ್ಲಿ ಯುವಜನರು ನಮ್ಮ ಸಂಸ್ಕೃತಿ, ಸಂಪ್ರದಾಯ ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ತುಳುನಾಡಿನ ಆಚಾರ-ವಿಚಾರ, ಹಳೆಯ ಆಹಾರ ಶೈಲಿ ಅರಿತುಕೊಳ್ಳಲು 'ಆಟಿಡೊಂಜಿ ದಿನಾಚರಣೆ' ಪೂರಕವಾಗಿದೆ. ಮಕ್ಕಳಿಗೂ ಇದರಿಂದ ನಮ್ಮ ಆಹಾರ ಪದ್ಧತಿ ಹೇಗಿತ್ತೆಂಬ ಅರಿವು ಉಂಟಾಗುತ್ತದೆ ಎಂದು ಸಿದ್ಧಿ ಕ್ರಿಯೇಟಿವ್​ ಸ್ಕಿಲ್ಸ್​ ಅಕಾಡೆಮಿಯ ಪ್ರವರ್ತಕಿ ರಮ್ಯಾ ಎ.ಸಿ. ತಿಳಿಸಿದರು.
ಉಡುಪಿಯ ಸಿದ್ಧಿ ಕ್ರಿಯೇಟಿವ್​ ಸ್ಕಿಲ್ಸ್​ ಅಕಾಡೆಮಿಯಲ್ಲಿ ಸೋಮವಾರ ಆಯೋಜಿಸಿದ್ದ 'ಆಟಿಡೊಂಜಿ ದಿನ ಸಡಗರ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಕಾಡೆಮಿಯ ಹಳೆಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಶುಚಿ ಮತ್ತು ರುಚಿಯಾಗಿ ತಯಾರಿಸಿದ 39 ಬಗೆಯ ಸಾಂಪ್ರದಾಯಿಕ ಆಟಿ ತಿಂಗಳ ಖಾದ್ಯ ತಂದಿದ್ದು, ಎಲ್ಲರೂ ಹಂಚಿಕೊಂಡು ಸವಿದರು.

ಆಟಿ ತಿಂಗಳ ಸಂಪ್ರದಾಯ ಪರಿಚಯಿಸಲು ವಿದ್ಯಾರ್ಥಿಗಳಿಗೆ ಹುಲಿ-ಕುರಿ, ಕುಂಟೆಬಿಲ್ಲೆ, ಹಾಡು, ವಿವಿಧ ಮನೋರಂಜನಾ ಆಟಗಳನ್ನೂ ಆಯೋಜಿಸಲಾಗಿತ್ತು. ಪಾಲ್ಗೊಂಡವರಿಗೆ ಅಭಿನಂದನಾ ಪತ್ರ ಹಾಗೂ ಉಡುಗೊರೆ ನೀಡಲಾಯಿತು. 

ಆ.15 ಮತ್ತು 16ರಂದು ಅಕಾಡೆಮಿಯಲ್ಲಿ ನಡೆಯಲಿರುವ ಕಾರ್ಯಾಗಾರದ ಕುರಿತು ಮಾಹಿತಿ ನೀಡಲಾಯಿತು.

ಹರ್ಷಿತಾ ಡಿ.ಕೆ. ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರು ಸಹಕರಿಸಿದರು.